ಭಾರತ, ಮಾರ್ಚ್ 28 -- ಮುಸ್ಲಿಂ ಬಾಂಧವರು ಸದ್ಯ ರಂಜಾನ್ ತಿಂಗಳ ಉಪವಾಸದಲ್ಲಿದ್ದಾರೆ. ರೋಜಾ ಆಚರಿಸುವ ಸಂದರ್ಭದಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಏನನ್ನೂ ಸೇವಿಸುವಂತಿಲ್ಲ. ದ್ರವ ರೂಪದ ಆಹಾರ ಕೂಡ ಇವರ ಬಾಯಿಗೆ ಹೋಗುವಂತಿಲ್ಲ. ಮುಸ್ಸಂಜೆ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ರೋಜಾ ಅಥವಾ ರಂಜಾನ್ ಉಪವಾಸವನ್ನು ಮುರಿಯುತ್ತಾರೆ. ಇದನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ರಾತ್ರಿ ಇಫ್ತಾರ್‌ನ ಸಂದರ್ಭದಲ್ಲಿ ಬಿರಿಯಾನಿ, ಕಬಾಬ್ ನಾನಾ ರೀತಿಯ ಪಾನೀಯಗಳು ಹೀಗೆ ಸಾಕಷ್ಟು ರೀತಿಯ ಭಕ್ಷ್ಯಗಳನ್ನು ಮಾಡಲಾಗುತ್ತದೆ.

ರೋಜಾ ಸಂದರ್ಭದಲ್ಲಿ ಇಡೀ ದಿನ ಮುಸ್ಲಿಮರು ಉಪವಾಸ ಇರುವುದರಿಂದ ಇಫ್ತಾರ್‌ನ ಸಂದರ್ಭದಲ್ಲಿ ದೇಹದಲ್ಲಿ ನೀರಿನಂಶ ಹೆಚ್ಚಿಸಲು ವಿವಿಧ ರೀತಿಯ ಪಾನೀಯಗಳನ್ನು ತಯಾರಿಸಿ ಕುಡಿಯುವುದು ನಿಜಕ್ಕೂ ಒಳ್ಳೆಯ ಆಯ್ಕೆಯಾಗಿದೆ. ಇಫ್ತಾರ್ ಕೂಟದಲ್ಲಿ ನೀವು ಮಾಡಬಹುದಾದ ರುಚಿ ರುಚಿಯಾದ ಹಾಗೂ ನೋಡಲೂ ಅತ್ಯಂತ ಮನಮೋಹಕ ಎನಿಸುವ ವಿವಿಧ ಪಾನೀಯಗಳನ್ನು ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.

ಹೆಸರೇ ಹೇಳು...