ಭಾರತ, ಮಾರ್ಚ್ 2 -- ಮುಸ್ಲೀಮರ ಪವಿತ್ರ ರಂಜಾನ್ ಮಾಸ ಇಂದಿನಿಂದ (ಮಾರ್ಚ್ 2) ಪ್ರಾರಂಭವಾಗಲಿದೆ. ಮೊದಲ ದಿನದಿಂದಲೇ ಉಪವಾಸವೂ ಆರಂಭವಾಗುತ್ತದೆ. ಇಫ್ತಾರ್ ಮೂಲಕ ದಿನದ ರಂಜಾನ್ ಉಪವಾಸವನ್ನು ಮುರಿಯಲಾಗುತ್ತದೆ. ಈ ಸಮಯದಲ್ಲಿ ಕರ್ಜೂರ ಸೇವಿಸಿ ಉಪವಾಸ ಮುರಿಯುವುದು ವಾಡಿಕೆ. ಆದರೆ ದಿನವಿಡೀ ಉಪವಾಸವಿದ್ದು ದಣಿದ ದೇಹಕ್ಕೆ ರಿಫ್ರೆಶಿಂಗ್ ಪಾನೀಯದ ಅಗತ್ಯವಿರುತ್ತದೆ. ಈ ಪಾನೀಯಗಳು ದೇಹದಲ್ಲಿ ಶಕ್ತಿಯ ಮಟ್ಟ ಹೆಚ್ಚಲು ಸಹಕಾರಿ. ಇದು ನಿರ್ಜಲೀಕರಣ ತಪ್ಪಿಸಲು ನೆರವಾಗುತ್ತದೆ. ನೀವು ರಂಜಾನ್ ಉಪವಾಸ ಮಾಡುತ್ತಿದ್ದು, ಇಫ್ತಾರ್ ಸಮಯಕ್ಕೆ ಈ 7 ಪಾನೀಯಗಳನ್ನು ತಯಾರಿಸಿ ಕುಡಿಯಬಹುದು. ರಂಜಾನ್ ಇಫ್ತಾರ್‌ಗೆ ತಯಾರಿಸಲು ಸೂಕ್ತ ಎನ್ನಿಸುವ 7 ಪಾನೀಯಗಳು ಇಲ್ಲಿವೆ.

ಸೋಂಪು-ನಿಂಬೆ ಪಾನೀಯಸೋಂಪು, ನಿಂಬೆ ರಸ, ಕರಿಮೆಣಸು, ಕಪ್ಪು ಉಪ್ಪು, ಪುದೀನ ಎಲೆಗಳು ಮತ್ತು ಐಸ್ ಕ್ಯೂಬ್‌ಗಳನ್ನು ಸೇರಿಸಿ ತಕ್ಷಣಕ್ಕೆ ತಯಾರಾಗುವ ರಿಫ್ರೆಶಿಂಗ್‌ ಪಾನೀಯವನ್ನು ತಯಾರಿಸಬಹುದು. ಈ ಪಾನೀಯವು ನಿಮ್ಮನ್ನು ಹೈಡ್ರೇಟ್ ಮಾಡುವುದಲ್ಲದೆ, ದೇಹವನ್ನು ನಿರ್ವಿಷಗೊಳಿಸ...