Delhi, ಮಾರ್ಚ್ 2 -- Ramadan 2025: ಮುಸ್ಲೀಂ ಬಾಂಧವರ ಪವಿತ್ರ ಹಬ್ಬ ರಂಜಾನ್‌ ಉಪವಾಸ ಭಾರತದಲ್ಲಿ ಭಾನುವಾರದಿಂದ ಆರಂಭಗೊಂಡಿದೆ. ಶನಿವಾರ ಸಂಜೆ ಚಂದ್ರ ದರ್ಶನ ಆಗಿದ್ದರಿಂದ ಭಾನುವಾರದಿಂದ ಉಪವಾಸ ಸಹಿತ ಎಲ್ಲಾ ಧಾರ್ಮಿಕ ಚಟುವಟಿಕೆಗಳು ಭಾನುವಾರದಿಂದಲೇ ಭಾರತದಾದ್ಯಂತ ಪ್ರಾರಂಭವಾದವು. ಬೆಳಿಗಿನ ಜಾವವೇ ಊಟೋಪಚಾರವನ್ನು ಮುಗಿಸಿದ ಮುಸ್ಲೀಂ ಬಾಂಧವರು ಒಂದು ತಿಂಗಳ ಉಪವಾಸವನ್ನು ಆರಂಭಿಸಿದರು. ಭಾನುವಾರ ಬೆಳಿಗ್ಗೆಯೇ ಮಸೀದಿಗಳಿಗೂ ತೆರಳಿ ನಮಾಜ್‌ ಅನ್ನು ಮಾಡಿದರು. ಕೆಲವರು ಮನೆಯಲ್ಲಿಯೆ ಧಾರ್ಮಿಕ ವಿಧಿ ವಿಧಾನಗಳನ್ನು ಆರಂಭಿಸಿದರು. ಕೆಲವು ದೇಶಗಳಲ್ಲಿ ಶನಿವಾರದಿಂದಲೇ ಪವಿತ್ರ ರಂಜಾನ್‌ ಹಬ್ಬದ ಉಪವಾಸಗಳು ಶುರುವಾದರೆ, ಭಾರತದಲ್ಲಿ ಮಾತ್ರ ಒಂದು ದಿನ ತಡವಾಯಿತು.

ಭಾರತದ ಪ್ರಮುಖ ನಗರಗಳು, ಕರ್ನಾಟಕದ ಹಲವು ಭಾಗಗಳಲ್ಲಿ ರಂಜಾನ್‌ ಉಪವಾಸ ಆರಂಭಗೊಂಡಿರುವುದರಿಂದ ಇನ್ನು ಒಂದು ತಿಂಗಳ ಕಾಲ ನಿರಂತರವಾಗಿ ಚಟುವಟಿಕೆಗಳು ಇರಲಿವೆ. ವಿವಿಧ ಪ್ರವಾದಿ ವಚನಗಳಲ್ಲಿ ಬರುವ ಜೀವನ ವೃತ್ತಾಂತಗಳ ಪ್ರಕಾರ, ಚಂದ್ರನ ದರ್ಶನದ ಆಧಾರದಲ್ಲಿ ಈ ತಿ...