ಭಾರತ, ಫೆಬ್ರವರಿ 19 -- ಜಗತ್ತಿನ ವಿವಿಧ ಭಾಗಗಳಲ್ಲಿರುವ ಮುಸ್ಲಿಮರು ಪ್ರತಿ ವರ್ಷ ಪವಿತ್ರ ರಂಜಾನ್ ಮಾಸವನ್ನು ಬಹಳ ಶೃದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ಈ ಸಮಯದಲ್ಲಿ ಒಂದು ತಿಂಗಳ ಕಾಲ ಕಟ್ಟುನಿಟ್ಟಿನ ಉಪವಾಸದ ಜೊತೆಗೆ ಅಲ್ಲಾಹುವಿನ ಸ್ಮರಣೆ ಮಾಡುತ್ತಾರೆ. ಈ ವರ್ಷ ರಂಜಾನ್ ಹಬ್ಬವು ಫೆಬ್ರವರಿ 28 ರ ಸಂಜೆ ಅಮಾವಾಸ್ಯೆಯ ನಂತರ ಪ್ರಾರಂಭವಾಗುತ್ತದೆ ಮತ್ತು ರಂಜಾನ್ ಮಾಸವು ಮಾರ್ಚ್ 30 ರಂದು ಕೊನೆಗೊಳ್ಳುತ್ತದೆ. ಈ ಪವಿತ್ರ ಮಾಸವು ಈದ್-ಉಲ್-ಫಿತರ್ ಹಬ್ಬದ ಆಚರಣೆಯೊಂದಿಗೆ ಕೊನೆಗೊಳ್ಳುತ್ತದೆ. ‌ಭಾರತ ಮತ್ತು ಸೌದಿ ಅರೇಬಿಯಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಚಂದ್ರನ ದರ್ಶನಗಳನ್ನು ಆಧರಿಸಿ ಈದ್ ಉಲ್ ಫಿತರ್‌ನ ದಿನಾಂಕವು ಬದಲಾಗಬಹುದು.

ರಂಜಾನ್ ಮಾಸದಲ್ಲಿ ಉಪವಾಸವೇ ವಿಶೇಷ. ಈ ಸಮಯದಲ್ಲಿ ಮುಸ್ಲಿಮರು ಸೂರ್ಯೋದಯಕ್ಕೂ ಮುಂಚೆ ಎದ್ದು ಪ್ರಾರ್ಥನೆ ಸಲ್ಲಿಸಿ, ಸೆಹ್ರಿ ಪಾಲಿಸುತ್ತಾರೆ. ಸೆಹ್ರಿ ಎಂದರೆ ಉಪವಾಸ ಆರಂಭಿಸುವ ಮುನ್ನ ಪಾಲಿಸುವ ಕ್ರಮ. ನಂತರ ದಿನವಿಡೀ ನೀರು ಕೂಡ ಕುಡಿಯದೇ ಉಪವಾಸ ಇರುತ್ತಾರೆ. ಸೂರ್ಯೋದಯದ ನಂತರ ಇಫ್ತಾ...