Bengaluru, ಮಾರ್ಚ್ 23 -- ಈದ್-ಉಲ್-ಫಿತರ್ ಹಬ್ಬವು ಭೌಗೋಳಿಕ ಗಡಿಗಳನ್ನು ಮೀರುತ್ತದೆ. ಜಗತ್ತಿನಾದ್ಯಂತ ಇರುವ ಲಕ್ಷಾಂತರ ಮುಸ್ಲಿಮರು ಶ್ರದ್ಧ ಭಕ್ತಿಯಿಂದ ಪವಿತ್ರ ರಂಜಾನ್ ಆಚರಿಸುತ್ತಾರೆ. ರಂಜಾನ್ ಹಬ್ಬ ಯಾವಾಗ, ರಂಜಾನ್ ಮಾಸದ ಕೊನೆಯ ದಿನ ಯಾವಾಗ, 2025ರ ಈದ್ ಉಲ್ ಫಿತರ್ ಅನ್ನು ಮಾರ್ಚ್ 31 ಅಥವಾ ಏಪ್ರಿಲ್ 1, ಈ ಎರಡು ದಿನಾಂಕಗಳಲ್ಲಿ ಯಾವಾಗ ಆಚರಿಸುತ್ತಾರೆ. ಭಾರತ, ಬಾಂಗ್ಲಾದೇಶ, ಪಾಕಿಸ್ತಾನ ದೇಶದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸುವ ದಿನಾಂಕ ಹಾಗೂ ಭಾರತದಲ್ಲಿ ಸರ್ಕಾರಿ ರಜೆ, ಅದರಲ್ಲೂ ಕರ್ನಾಟಕದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ರಂಜಾನ್ ಮಾಸ ಆರಂಭವಾದಾಗಿನಿಂದ ಮುಗಿಯುವವರಿಗೆ ಮುಸ್ಲಿಂ ಬಾಂಧವರಿಗೆ ಹಬ್ಬದ ವಾತಾವರಣ ಇರುತ್ತದೆ. ನಿತ್ಯ ಉಪವಾಸ, ವಿಶೇಷ ಪ್ರಾರ್ಥನೆ, ಬಗೆ ಬಗೆಯ ಖಾದ್ಯಗಳು, ಹಬ್ಬಕ್ಕಾಗಿ ಶಾಪಿಂಗ್ ಹೀಗೆ ರಂಜಾನ್ ಮಾಸ ಮುಗಿಯುವುದೇ ಗೊತ್ತಾಗಲ್ಲ. ರಂಜಾನ್ ಮಾಸದ ಕೊನೆಯ ದಿನ, ಈದ್ ಉಲ್ ಫಿತರ್ ಹಬ್ಬವನ್ನು ಯಾವಾಗ ಆಚರಿಸುತ್ತಾರೆ ಎಂಬುದನ್ನು ನೋಡುವುದಾದರೆ, ಗ್ರೆಗೋರಿಯನ್ ಕ್ಯಾಲೆಂಡ...