ಭಾರತ, ಮಾರ್ಚ್ 2 -- Ramachari Serial: ರಾಮಾಚಾರಿ ದೇವಸ್ಥಾನಕ್ಕೆ ಪೂಜೆಗೆಂದು ಹೊರಟಿರುತ್ತಾನೆ. ಮುರಾರಿ ಕೂಡ ಅವನ ಜತೆಯಲ್ಲೇ ಬಂದಿದ್ದಾನೆ. "ಬೇಗ ಬೇಗ ಬಾ ಮುರಾರಿ, ಪೂಜೆಗೆ ತಡವಾಗುತ್ತದೆ" ಎಂದು ರಾಮಾಚಾರಿ ಹೇಳಿದ್ದಾನೆ. ಆಗ ಮುರಾರಿ "ನನ್ನಿಂದ ತಡ ಆಗೋದಿಲ್ಲ ನೀನು ಮುಂದೆ ಹೋಗು ಎನ್ನುತ್ತಾ ಸಾಗಿದ್ದಾನೆ" ಅವರು ಮನೆಯಿಂದ ಹೊರಗಡೆ ಹೋಗುವ ಸಮಯಕ್ಕೆ ಸರಿಯಾಗಿ ಅಲ್ಲಿಗೆ ಜಾನಕಿ ಬಂದಿದ್ದಾಳೆ. ಅಮ್ಮನನ್ನು ಕಂಡ ತಕ್ಷಣ ರಾಮಾಚಾರಿ ಅವಳ ಕಾಲಿಗೆ ನಮಸ್ಕರಿಸಿದ್ದಾನೆ. ನಮಸ್ಕಾರ ಮಾಡಿ "ಆಶಿರ್ವಾದ ಮಾಡು ನಾನು ದೇವಸ್ಥಾನಕ್ಕೆ ಹೋಗಿ ಬರುತ್ತೇನೆ" ಎಂದಿದ್ದಾನೆ. ಅದನ್ನು ಅಲ್ಲೇ ನಿಂತಿದ್ದ ಚಾರು ನೋಡಿದ್ದಾಳೆ. ತಮಾಷೆಯಾಗಿ "ಅತ್ತೆ ಆಶಿರ್ವಾದ ತಗೊಂಡ್ರೆ ಸಾಕಾ? ನನ್ನ ಆಶಿರ್ವಾದಾನೂ ತಗೋ" ಎಂದು ಹೇಳಿದ್ದಾಳೆ.

ಆದರೆ ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ರಾಮಾಚಾರಿ ಸೀದಾ ಬಂದು ಅವಳ ಕಾಲಿಗೆ ನಮಸ್ಕಾರ ಮಾಡಿದ್ದಾನೆ. ಅದನ್ನು ನೋಡಿ ಚಾರು ಭಾವುಕಳಾಗಿದ್ದಾಳೆ. ಅವಳಿಗೆ ಇರುಸು, ಮುರುಸು ಉಂಟಾಗಿದೆ. "ನಾನೇನೋ ತಮಾಷೆಗೆ ಹೇಳಿದರ...