ಭಾರತ, ಮಾರ್ಚ್ 17 -- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಅವನ ಕುಟುಂಬದವರೆಲ್ಲ ತುಂಬಾ ಖುಷಿಯಾಗಿಯೇ ಕಾಲ ಕಳೆಯುತ್ತಿದ್ದರು. ಆದರೆ ರುಕ್ಕು ಮದುವೆಯಾಗಿ ಬಂದಾಗಿನಿಂದ ಮತ್ತೆ ಒಂದಲ್ಲ ಒಂದು ರೀತಿಯ ತೊಂದರೆ ಆರಂಭವಾಗಿದೆ. ಮುಖ್ಯವಾಗಿ ರುಕ್ಕುನೇ ಈ ಎಲ್ಲ ತೊಂದರೆಗಳಿಗೆ ಕಾರಣವಾಗಿದ್ದಾಳೆ.ಕಿಟ್ಟಿ ಮೊದಲು ಹೀಗಿರಲಿಲ್ಲ. ಈಗ ಮನೆಯಲ್ಲಿ ಯಾರನ್ನು ಕಂಡರು ಅನುಮಾನದಲ್ಲೇ ಮಾತಾಡುವ ರೀತಿ ಆಗಿದ್ದಾನೆ. ರಾಮಾಚಾರಿಯಂತು ಮೊದಲಿನಿಂದಲೂ ತುಂಬಾ ಒಳ್ಳೆಯವನು ಈಗ ಚಾರುವನ್ನು ತುಂಬಾ ಪ್ರೀತಿ ಮಾಡುತ್ತಿದ್ದಾನೆ. ಮನೆಯಲ್ಲಿ ಚಹಾ ಮಾಡುವಾ ಹಾಲು ಒಡೆದು ಹೊಗಿದೆ ಎಂದು ಜಾನಕಿ ಬೇಸರ ಮಾಡಿಕೊಂಡಿರುತ್ತಾಳೆ.

ಆದರೆ ಚಾರು ಅದೇ ಹಾಲನ್ನು ಬಳಸಿಕೊಂಡು ಸಿಹಿ ಮಾಡಿರುತ್ತಾಳೆ. ಮನೆಯಲ್ಲಿರುವ ಎಲ್ಲರನ್ನೂ ಒಟ್ಟಿಗೆ ಕರೆದು ಎಲ್ಲರಿಗೂ ಸಿಹಿ ಕೊಡುತ್ತಾ ಇರುತ್ತಾಳೆ. ಎಲ್ಲರೂ ಚಾರುವನ್ನು ಹೊಗಳುತ್ತಾ ಆ ಸಿಹಿಯನ್ನು ತಿನ್ನುತ್ತಾ ಇರುತ್ತಾರೆ. ಆದರೆ ಇನ್ನೂ ಕಿಟ್ಟಿ ಮತ್ತು ರುಕ್ಕು ಬಂದಿರುವುದಿಲ್ಲ. ಅವರು ಬಂದ ತಕ್ಷಣ ಅವರ...