ಭಾರತ, ಫೆಬ್ರವರಿ 7 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮತ್ತು ಚಾರಿ ಇಬ್ಬರೂ ಶ್ರುತಿ ಮದುವೆ ಜವಾಬ್ಧಾರಿ ತೆಗೆದುಕೊಂಡಿದ್ದಾರೆ. ಚಾರು ಅದೇ ಕೆಲಸದಲ್ಲಿದ್ಧಾಳೆ. ಶ್ರುತಿಗೆ ಯಾರಾದರೂ ಒಳ್ಳೆಯ ಹುಡುಗನನ್ನು ನೋಡಿ ಮದುವೆ ಮಾಡಬೇಕು ಎಂದು ಅವಳು ಬಯಸಿದ್ದಾಳೆ. ಹೀಗಿರುವಾಗ ಚಾರು ಅವಳ ತಂದೆಯ ಗೆಳೆಯರೊಬ್ಬರ ಮಗನನ್ನು ವಿಚಾರಿಸುವ ಸಲುವಾಗಿ ರಾಮಾಚಾರಿ ಜತೆ ಹೋಗಿದ್ಧಾಳೆ. ಆದರೆ ಅವರು ತುಂಬಾ ಶ್ರೀಮಂತರಾಗಿರುತ್ತಾರೆ. ಆ ಕಾರಣಕ್ಕಾಗಿ ಅವರ ಬಳಿ ಶ್ರುತಿ ವಿಚಾರವನ್ನು ಮಾತಾಡಿದ್ದು ರಾಮಾಚಾರಿಗೆ ಶಾಕ್ ಆಗುತ್ತದೆ. "ನೀವು ಮೊದಲೇ ಈ ವಿಚಾರ ಮಾತಾಡ್ತೀನಿ ಅಂತ ನನ್ನ ಹತ್ರ ಯಾಕೆ ಹೇಳಿರಲಿಲ್ಲ?" ಎಂದು ರಾಮಾಚಾರಿ ಪ್ರಶ್ನೆ ಮಾಡುತ್ತಾನೆ. ಆದರೆ ಚಾರು ಈ ಹಿಂದೆಯೇ ತನ್ನ ತಂದೆ ಬಳಿ ಈ ವಿಚಾರ ಮಾತಾಡಿದ್ದಾಳೆ ಅನ್ನೋದು ರಾಮಾಚಾರಿಗೆ ತಿಳಿದಿರುವುದಿಲ್ಲ.

ಇತ್ತ ಜಾನಕಿ ಹೆದರಿಕೊಂಡೇ ಪ್ರತಿಕ್ಷಣ ಬದುಕುವಂತಾಗಿದೆ. ವೈಶಾಖಾ ಒಂದು ಹೊಸ ಉಪಾಯ ಮಾಡಿದ್ದಾಳೆ. ಶ್ರುತಿ ಮಾಡಿದ ತಪ್ಪನ್ನೇ ಅಸ್ತ್ರವಾಗಿಸಿಕೊಂಡು ಮೋಸ ಮಾಡಲು ನೋಡುತ್ತಿದ್ದಾಳೆ. ಜಾ...