ಭಾರತ, ಜನವರಿ 30 -- ರಾಮಾಚಾರಿ ಹಾಗೂ ಚಾರು ಇಬ್ಬರೂ ಶ್ರುತಿಗೆ ಸಿಹಿ ಸಮಾಚಾರ ಹೇಳಬೇಕು ಎಂದು ಬಯಸಿ ಬಂದಿರುತ್ತಾರೆ. ಆದರೆ ಅವರಿಬ್ಬರಿಗೆ ಮನೆಯಲ್ಲಿ ಏನು ನಡೆದಿದೆ ಎಂಬ ವಿಚಾರ ಗೊತ್ತಾಗಿರುವುದಿಲ್ಲ. ಹಾಗಾಗಿ ನೇರವಾಗಿ ಅವರು ಶ್ರುತಿ ಇರುವ ಕೋಣೆ ಕಡೆ ಹೋಗುತ್ತಾರೆ, ಜಾನಕಿ ಮಾತ್ರ ಶ್ರುತಿ ಪ್ರೀತಿ ಮಾಡಿರುವ ವಿಚಾರವನ್ನು ತಿಳಿದು ತುಂಬಾ ನೋವಿನಿಂದ ಕೂತಿರುತ್ತಾಳೆ. ಶ್ರುತಿ ತಾನು ಪ್ರೀತಿಸಿದವನ ಜತೆ ಹೋಗಿ ಕೆಲ ದಿನ ಉಳಿದುಕೊಂಡು ಬಂದಿರುತ್ತಾಳೆ. ಅವಳು ಕಾಲ್‌ನಲ್ಲಿ ಮಾತಾಡುತ್ತಾ ಇರುವ ಸಂದರ್ಭದಲ್ಲಿ ಜಾನಕಿಗೆ ಈ ಸತ್ಯದ ಅರಿವಾಗುತ್ತದೆ. ವಿಷಯ ತಿಳಿದ ತಕ್ಷಣ ಜಾನಕಿ ಬೇಸರ ಮಾಡಿಕೊಳ್ಳುತ್ತಾಳೆ. ಈ ವಿಚಾರದ ಬಗ್ಗೆ ಶ್ರುತಿ ಮತ್ತು ಜಾನಕಿ ಮಾತಾಡುವುದು ರುಕ್ಕುಗೂ ಕೇಳಿಸಿರುತ್ತದೆ.

ಇದನ್ನೂ ಓದಿ: Gana Movie: ಟ್ರೈಮ್‌ ಟ್ರಾವೆಲ್‌ ಕಥೆಯೊಂದಿಗೆ ಬಂದ ಪ್ರಜ್ವಲ್‌ ದೇವರಾಜ್‌; ಈ ಶುಕ್ರವಾರ ಚಿತ್ರಮಂದಿರಗಳಲ್ಲಿ ಗಣ

ರಾಮಾಚಾರಿ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುವ ಧಾರಾವಾಹಿಯಾಗಿದ್ದು, ಇದರಲ್ಲಿ ರಾಮಾಚಾರಿ ಹಾಗೂ ಕಿಟ್ಟ...