ಭಾರತ, ಮಾರ್ಚ್ 4 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ವೈಶಾಖಾ ನಡುವೆ ಮೊದಲಿನಿಂದಲೂ ವೈಮನಸ್ಸಿದೆ. ಆದರೆ, ಈಗ ವೈಶಾಖಾ ತಪ್ಪು ಮಾಡಿ ಚಾರು ಎದುರು ಸಿಕ್ಕಿಬಿದ್ದಿದ್ದಾಳೆ.

ಚಾರುಗೆ ಈ ಹಿಂದೆ ಅತ್ತೆ ಜಾನಕಿ ಕೈಯ್ಯಿಂದ ವೈಶಾಖಾ ಬೇಕು ಎಂದೇ ಹೊಡೆಸಿದ್ದಳು. ಆ ವಿಚಾರ ಈಗ ಚಾರುಗೆ ಗೊತ್ತಾಗಿದೆ.

ಈಗ ಅದೇ ನೋವನ್ನು ವೈಶಾಖಾ ಅನುಭವಿಸಬೇಕು ಎಂದು ಚಾರು ಬಯಸಿದ್ದಾಳೆ. ಅದಕ್ಕೆ ತಕ್ಕಂತೆ ಉಪಾಯವನ್ನೂ ಮಾಡಿದ್ದಾಳೆ. ರುಕ್ಕು ಕೈಯಿಂದ ಹೊಡೆಸುತ್ತಿದ್ದಾಳೆ.

ರುಕ್ಕು ಮೊದಲು ತಾನು ವೈಶಾಖಾಳಿಗೆ ಹೊಡೆಯಲು ಒಪ್ಪೋದಿಲ್ಲ. ಒಪ್ಪಿದರೂ ಕೆನ್ನೆ ಸವರುವ ರೀತಿ ಮೃದುವಾಗಿ ಹೊಡೆಯುತ್ತಿದ್ದಳು.

ರುಕ್ಕು ಆ ರೀತಿ ಮಾಡುವುದನ್ನು ನೋಡಿ ಕೋಪಗೊಂಡ ಚಾರು, ರುಕ್ಕು ಕೆನ್ನೆಗೆ ಹೊಡೆದು, ಈ ರೀತಿ ನೀನು ಹೊಡೆಯಬೇಕು ಎನ್ನುತ್ತಾಳೆ.

ಅದೇ ನೋವಿಗೆ ರುಕ್ಕು, ವೈಶಾಖಾಳ ಕೆನ್ನೆಗೆ ಜೋರಾಗಿ ಬಾರಿಸುತ್ತಾಳೆ. ವೈಶಾಖಾ ಆ ನೋವಿಗೆ ಚೀರುತ್ತಾಳೆ.

ರುಕ್ಮಿಣಿ ಕೂಡಾ ವೈಶಾಖ ಜೊತೆಗೆ ಇದ್ದಾಳೆ ಎಂಬ ಪೂರ್ತಿ ಸತ್ಯ ಇನ್ನೂ ಚಾರುಗೆ ತಿಳಿದಿಲ್ಲ. ಆ ವಿಚಾರ ಗ...