ಭಾರತ, ಫೆಬ್ರವರಿ 28 -- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ವೈಶಾಖಾಳಿಗೆ ಸರಿಯಾದ ಪಾಠ ಕಲಿಸಬೇಕು ಎಂದು ಅಂದುಕೊಂಡಿದ್ದಾಳೆ. ಅದೇ ಕಾರಣಕ್ಕೆ ಒಂದಷ್ಟು ಸುಲಭ ಉಪಾಯ ಮಾಡಿದ್ದಾಳೆ. ಆ ಉಪಾಯದಿಂದ ವೈಶಾಖಾಳಿಗೆ ತೊಂದರೆ ಆಗುತ್ತಿದೆ. ವೈಶಾಖಾ ದೇವಸ್ಥಾನಕ್ಕೆ ಭಿಕ್ಷೆ ಬೇಡಲು ಹೋಗಿದ್ದಾಳೆ. ಅಲ್ಲಿಂದ ಚಾರುಗೆ ಕಾಲ್ ಮಾಡಿದ್ದಾಳೆ. ಯಾಕೆಂದರೆ ದೇವಸ್ಥಾನಕ್ಕೆ ಹೋಗಿ ಭಿಕ್ಷೆ ಬೇಡು ಎಂದು ಹೇಳಿದವಳೇ ಚಾರು ಆಗಿರುತ್ತಾಳೆ. ಆದರೆ, ವೈಶಾಖಾಳಿಗೆ ಇದೆಲ್ಲ ಇಷ್ಟ ಇರುವುದಿಲ್ಲ. ಆದರೂ ತನಗೆ ಚಾರು ತೊಂದರೆ ಮಾಡಬಾರದು ಎಂದು ಅವಳು ಹೇಳಿದ್ದಕ್ಕೆಲ್ಲ ಒಪ್ಪಿಕೊಂಡಿದ್ದಾಳೆ. ಅವಳ ಜತೆ ರುಕ್ಕು ಕೂಡ ಇದ್ದಾಳೆ.

ರುಕ್ಕು ವೈಶಾಖಾ ಸರಿಯಾಗಿ ಭಿಕ್ಷೆ ಬೇಡುತ್ತಾ ಇದ್ದಾಳಾ, ಇಲ್ವಾ? ಎಂಬುದನ್ನು ಚಾರುಗೆ ತಿಳಿಸಬೇಕಾಗಿರುತ್ತದೆ. ಆ ಕಾರಣಕ್ಕಾಗಿ ಅವಳನ್ನೂ ಸಹ ವೈಶಾಖಾಳ ಜತೆ ಕಳಿಸಿಕೊಡುತ್ತಾಳೆ. ಆದರೆ, ದೇವಸ್ಥಾನದ ಮೆಟ್ಟಿಲ ಬಳಿ ಕೂರುವುದಕ್ಕೂ ಭಿಕ್ಷುಕರು ವೈಶಾಖಾಳಿಗೆ ಜಾಗ ಕೊಟ್ಟಿರುವುದಿಲ್ಲ. ಅದನ್ನು ಕಂಡು ವೈಶಾಖಾ ಕಾಲ್ ಮಾಡ...