ಭಾರತ, ಮಾರ್ಚ್ 11 -- ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಬೇಕು ಎಂದೇ ಚಾರುಗೆ ಹತ್ತಿರವಾಗಲು ನೋಡುತ್ತಿದ್ದಾಳೆ.

ಚಾರು ಮಾತ್ರ ವೈಶಾಖಾಳನ್ನು ಹತ್ತಿರಕ್ಕೆ ಸೇರಿಸುತ್ತಿಲ್ಲ. ವಿಷದ ಹಾವು ಎಂದಿಗೂ ವಿಷವನ್ನೇ ಕಾರುತ್ತದೆ ಎಂದು ಚಾರು ಹೇಳುತ್ತಿದ್ದಾಳೆ.

ಮೆಟ್ಟಿಲ ಮೇಲೆ ಕುಳಿತುಕೊಂಡು ಚಾರು, "ಯಾಕೋ ಇಂದು ಕಾಲು ನೋಯ್ತಾ ಇದ್ಯಲ್ಲ" ಎನ್ನುತ್ತಾಳೆ. ಅಷ್ಟರಲ್ಲಿ ವೈಶಾಖಾ ಚಾರು ಕಾಲು ಒತ್ತುತ್ತಾಳೆ.

ಆದರೆ ಇದೆಲ್ಲ ವೈಶಾಖಾಳ ನಾಟಕ ಎಂದು ಚಾರುಗೆ ಗೊತ್ತಿರುವ ಕಾರಣ ಅವಳು ಹೆಚ್ಚು ಮಾತಾಡುವುದಿಲ್ಲ. ನೀನು ನನ್ನ ಕಾಲು ಒತ್ತುವುದು ಬೇಡ ಎಂದು ನಿರಾಕರಿಸುತ್ತಾಳೆ.

ಆದರೆ, ವೈಶಾಖಾ ತನಗಾದ ತೊಂದರೆಯನ್ನು ನಿವಾರಿಸಿಕೊಳ್ಳಲು ಚಾರು ಸಹಾಯ ಬೇಡುತ್ತಿದ್ದಾಳೆ.

ವೈಶಾಖಾಳ ಮೈಗೆ ನಂಜು ಏರಿ ಮೈಯೆಲ್ಲ ತುರಿಸಲು ಆರಂಭವಾಗಿದೆ. ಚಾರು ಬೇಕು ಎಂದೇ ನೀನು ನಾಳೆ ಸಾಯುತ್ತೀಯ ಎಂದು ಹೆದರಿಸಿದ್ದಾಳೆ.

ವೈಶಾಖಾ ಕೂಡ ಚಾರು ಮಾತನ್ನೇ ನಂಬಿಕೊಂಡು ಭಯದಲ್ಲಿ ಬದುಕುತ್ತಿದ್ದಾಳೆ. ಚಾರು ಔಷಧ ಹೇಳಿದರೆ ಮಾತ್ರ ತಾನು ಗುಣವಾಗುತ್ತೇನೆ ಎಂದು ವೈಶಾಖಾ ...