ಭಾರತ, ಮಾರ್ಚ್ 25 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ಇಬ್ಬರೂ ಒಂದಾಗುತ್ತಿರುವ ಸಂದರ್ಭದಲ್ಲಿ ಮತ್ತೊಂದು ಸಮಸ್ಯೆ ಎದುರಾಗುತ್ತಿದೆ. ರಾಮಾಚಾರಿ ಆಫೀಸಿನಿಂದ ತುಸು ಬೇಗ ಮನೆಗೆ ಬಂದಿರುತ್ತಾನೆ. ರಾಮಾಚಾರಿ ಬರುತ್ತಿರುವುದನ್ನು ನೋಡಿ ಚಾರು ತುಂಬಾ ಸಂತಸದಿಂದ ಅವನ ಬಳಿ ಬಂದು ಅವನನ್ನು ಸ್ವಾಗತಿಸುತ್ತಾಳೆ. ರಾಮಾಚಾರಿ ಕೂಡ ತುಂಬಾ ಖುಷಿ ಖುಷಿಯಾಗಿ ಅವಳೊಟ್ಟಿಗೆ ಮಾತಾಡುತ್ತಾನೆ. "ಯಾಕೆ ಇವತ್ತು ಬೇಗ ಬಂದೆ?" ಎಂದು ಚಾರು ಪ್ರಶ್ನೆ ಮಾಡುತ್ತಾಳೆ. ಆಗ ರಾಮಾಚಾರಿ ಸತ್ಯ ಹೇಳುತ್ತಾನೆ. "ಆಫೀಸ್‌ನಲ್ಲಿ ಒಂದು ಪ್ರೆಸೆಂಟೇಶನ್ ಇತ್ತು, ಅದು ಮುಗಿದ ಬಳಿಕ ಯಾವುದೇ ಕೆಲಸ ಇರಲಿಲ್ಲ. ಹಾಗಾಗಿ, ಸುಮ್ಮನೆ ಕೂರೋದ್ಯಾಕೆ ಅಂತ ಬೇಗ ಬಂದೆ" ಎಂದು ಹೇಳುತ್ತಾನೆ. "ಪ್ರತಿದಿನವೂ ಹೀಗೆ ಇದ್ರೆ ಎಷ್ಟು ಚನಾಗಿರತ್ತೆ ಅಲ್ವಾ?" ಎಂದು ಚಾರು ಅವನನ್ನು ಪ್ರಶ್ನೆ ಮಾಡುತ್ತಾಳೆ.

ಆಗ ಅವನು ನೇರವಾಗಿ "ನಿಮ್ಮ ನಾಲಿಗೆ ತೋರ್ಸಿ ಎಂದು ಹೇಳುತ್ತಾನೆ" ಯಾಕೆಂದರೆ ಚಾರು ನಾಲಿಗೆಯಲ್ಲಿ ಮಚ್ಚೆ ಇರಬಹುದು ಎಂಬ ಅನುಮಾನ ಅವನಿಗಿರುತ್ತದೆ. ಅವಳು ಹ...