ಭಾರತ, ಮಾರ್ಚ್ 20 -- ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಯಾವುದೋ ಒಂದು ಅಪಾಯದಲ್ಲಿರುವ ಹುಡುಗಿಯನ್ನು ಕಾಪಾಡಿರುತ್ತಾನೆ. ಕಾರ್ ಬ್ರೇಕ್‌ ಫೇಲ್ ಆಗಿ ಆ ಹುಡುಗಿ ಮರವೊಂದಕ್ಕೆ ಕಾರ್‍‌ ಗುದ್ದಿರುತ್ತಾಳೆ. ಕಾರ್‍‌ನ ಎಲ್ಲ ಬಾಗಿಲುಗಳು ಬಂದ್ ಆಗಿರುವ ಕಾರಣ ಅವಳಿಗೆ ಒಳಗಡೆ ಉಸಿರಾಡಲು ಕಷ್ಟವಾಗುತ್ತಾ ಇರುತ್ತದೆ. ಕಾರ್ ಆಕ್ಸಿಡೆಂಟ್ ಆದ ಜಾಗದಲ್ಲಿ ಸಾಕಷ್ಟು ಜನ ಇದ್ದರೂ ಯಾರೂ ಅವಳನ್ನು ಕಾಪಾಡುವ ಯೋಚನೆ ಮಾಡಿರಲಿಲ್ಲ. ಆಗ ಅಲ್ಲಿಗೆ ಹೋಗಿ ಅವಳನ್ನು ಕಾಪಾಡಿದವನು ರಾಮಾಚಾರಿ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅವಳ ಪ್ರಾಣ ಉಳಿಸಿದ್ದಾನೆ. ಆ ಹುಡುಗಿಗೆ ರಾಮಾಚಾರಿ ತುಂಬಾ ಇಷ್ಟವಾಗಿದ್ದಾನೆ.

ರಾಮಾಚಾರಿಯ ಧೈರ್ಯ, ಅವನ ಕರುಣೆ, ಸಹನೆ ಇವೆಲ್ಲವನ್ನೂ ನೋಡಿದ ಆ ಹುಡುಗಿಗೆ ರಾಮಾಚಾರಿ ಇಷ್ಟ ಆಗಿದ್ದಾನೆ. ಮನೆಗೆ ಹೋದ ನಂತರ ಅವಳು ತನ್ನ ತಂದೆ, ತಾಯಿ ಬಳಿ ರಾಮಾಚಾರಿ ವಿಚಾರವಾಗಿ ಮಾತಾಡಿದ್ದಾಳೆ. ನನಗೆ ರಾಮಾಚಾರಿ ಇಷ್ಟ ಆಗಿದ್ದಾನೆ. ನಾನು ಅವನನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳುತ್ತಾಳೆ. ಆ ಮಾತಿಗೆ ಅವಳ ತಾಯಿ ಆಶ್ಚರ್ಯಪಟ್ಟಿದ್...