ಭಾರತ, ಮಾರ್ಚ್ 19 -- ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಇಬ್ಬರೂ ತುಂಬಾ ಸಮಾಧಾನದಲ್ಲಿ ಜೀವನ ನಡೆಸುತ್ತಿದ್ದಾರೆ. ಸಾಕಷ್ಟು ಜನ ಅವರಿಗೆ ತೊಂದರೆ ಕೊಡಲು ನೋಡಿದರು ಅವರು ಮಾತ್ರ ತಮ್ಮ ಪ್ರೀತಿಯನ್ನು ಭದ್ರಗೊಳಿಸಿಕೊಂಡಿದ್ದಾರೆ. ರಾಮಾಚಾರಿ ಮತ್ತು ಚಾರು ಈಗ ತಮ್ಮ ಹೊಸ ಲೋಕವನ್ನು ಪ್ರವೇಶ ಮಾಡಲು ಬಯಸುತ್ತಿದ್ದಾರೆ. ಅವರಿಗೆ ಮಕ್ಕಳನ್ನು ಮಾಡಿಕೊಳ್ಳುವ ಆಲೋಚನೆ ಇದೆ. ರಾಮಾಚಾರಿ ತಾಯಿ ಮೊಮ್ಮಗು ಬೇಕು ಎಂದು ತುಂಬಾ ಒತ್ತಾಯ ಮಾಡುತ್ತಿರುವ ಕಾರಣ ಅವರಿಬ್ಬರು ಆ ಯೋಚನೆ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಎಲ್ಲ ರೀತಿಯ ಕಷ್ಟಗಳನ್ನು ಕಳೆದುಕೊಂಡು ಹೊಸ ಬದುಕನ್ನು ನಿರ್ಮಾಣ ಮಾಡಿಕೊಳ್ಳುವ ಹಂತದಲ್ಲಿದ್ದಾರೆ.

ಹೀಗಿರುವಾಗ ಈ ದಿನ ರಾಮಾಚಾರಿ ಆಫೀಸಿಗೆ ಹೊರಡಲು ತಯಾರಾಗುತ್ತಾ ಇರುತ್ತಾನೆ. ಅವನು ತಯಾರಾಗಿ ಇನ್ನೇನು ಹೊರಡಬೇಕು ಆಗ ಅವನು ಚಾರುವನ್ನು ಕೂಗುತ್ತಾ ಗಡಿಬಿಡಿಯಿಂದ ಬರುತ್ತಾನೆ. ಚಾರು ಮನೆಯೊಳಗಿದ್ದಾಳೆ ಎಂದು ಅವನು ಅಂದುಕೊಂಡಿರುತ್ತಾನೆ. ಆದರೆ, ಚಾರು ಮನೆಯಲ್ಲಿ ಇರುವುದಿಲ್ಲ. ಅವಳು ಬೇರೆ ಕಡೆ ಹೋಗಿರುತ್ತಾಳ...