ಭಾರತ, ಫೆಬ್ರವರಿ 6 -- ರಾಮಾಚಾರಿ ತನ್ನ ಕೋಣೆಯಲ್ಲಿ ಏನೋ ಕೆಲಸ ಮಾಡುತ್ತಾ ಇರುತ್ತಾನೆ. ಅದೇ ಸಮಯಕ್ಕೆ ಸರಿಯಾಗಿ ಚಾರು ಅಲ್ಲಿಗೆ ಬರುತ್ತಾಳೆ. ಒಂದು ಮುಖ್ಯವಾದ ವಿಚಾರವನ್ನು ಅವಳು ಮಾತನಾಡಬೇಕು ಎಂದುಕೊಂಡು ಬಂದಿರುತ್ತಾಳೆ. ಆದರೆ ಅವನು ಕೆಲಸ ಮಾಡುತ್ತಾ ಇರುವುದನ್ನು ನೋಡಿ ಏನೂ ಮಾತಾಡದೇ ಸುಮ್ಮನೇ ನಿಂತಿರುತ್ತಾಳೆ. ರಾಮಾಚಾರಿ ತಾನೇ ಅವಳನ್ನು ಮಾತಾಡಿಸಿ, "ಏನಾಗಿತ್ತು ಮೇಡಂ? ನಾನು ಬ್ಯುಸಿ ಇದೀನಿ ಎಂದು ನೀವು ಅಂದುಕೊಳ್ಳೋದು ಬೇಡ. ನೀವು ಏನು ಹೇಳಬೇಕು ಎಂದು ಬಂದಿರುವಿರೋ ಆ ವಿಚಾರ ಹೇಳಿ" ಎಂದು ಹೇಳುತ್ತಾನೆ. ಆಗ ಚಾರು ತಡಮಾಡದೆ ಶ್ರುತಿ ಮದುವೆ ವಿಚಾರ ಮಾತಾಡುತ್ತಾಳೆ.

"ಈ ವಯಸ್ಸಲ್ಲಿ ಮಾವಾ ಯಾಕೆ ಅಷ್ಟೊಂದು ತೊಂದರೆ ತಗೊಬೇಕು? ನಾವೇ ಶ್ರುತಿ ಮದುವೆ ಜವಾಬ್ದಾರಿ ತಗೊಬಹುದಲ್ವಾ?" ಎಂದು ಕೇಳುತ್ತಾಳೆ. ಆಗ ರಾಮಾಚಾರಿ "ಹೌದು, ಅದರಲ್ಲಿ ತಪ್ಪೇನು ಇಲ್ಲ ನೀವು ಏನೇ ನಿರ್ಧಾರ ತೆಗೆದುಕೊಂಡರೂ ನಾನು ನಿಮ್ಮ ಜತೆ ಇರುತ್ತೇನೆ?" ಎಂದು ಹೇಳುತ್ತಾನೆ. ಹಾಗಾದ್ರೆ ತಡ ಮಾಡೋದ್ಯಾಕೆ ಬನ್ನಿ ಹೋಗೋಣ ಎನ್ನುತ್ತಾ ಚಾರು ಮಾವ ಇದ್ದಲ್ಲ...