ಭಾರತ, ಫೆಬ್ರವರಿ 24 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಹಾಗೂ ರಾಮಾಚಾರಿ ಇಬ್ಬರೂ ಈಗೀಗ ತಮ್ಮ ಪ್ರೀತಿ ವಿನಿಮಯ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಆದರೆ, ವೈಶಾಖಾ ಮತ್ತು ರುಕ್ಕು ಇಬ್ಬರಿಗೂ ಇದನ್ನು ಸಹಿಸಿಕೊಳ್ಳಲು ಸಾದ್ಯವಾಗುತ್ತಿಲ್ಲ. ಇವರಿಬ್ಬರ ಸಂಸಾರವನ್ನು ಹಾಳು ಮಾಡಲೇಬೇಕು ಎಂದು ವೈಶಾಖಾ ಮತ್ತು ರುಕ್ಕು ನಿರ್ಧಾರ ಮಾಡಿದ್ದಾರೆ. ವೈಶಾಖಾ, ರಾಮಾಚಾರಿಯನ್ನು ಕೊಲ್ಲಲ್ಲು ಎಲ್ಲ ತಯಾರಿ ಮಾಡಿಕೊಂಡಿದ್ದಾಳೆ. ರಾಮಾಚಾರಿಗೆ ಎಂದು ಮಾಡಿದ ಅಡುಗೆಯಲ್ಲಿ ವಿಷ ಹಾಕಿದ್ದಾಳೆ. ಆಗ ರುಕ್ಕು ಕೂಡ ಅವಳ ಜತೆಯಲ್ಲೇ ಇರುತ್ತಾಳೆ. "ಸಾಕಷ್ಟು ಬಾರಿ ಯೋಚನೆ ಮಾಡಿ ವಿಷ ಹಾಕಬೇಕು. ಇದು ನಿಜವಾಗಿಯೂ ವಿಷವೇ ಹೌದಾ?" ಎಂದು ರುಕ್ಕು ಪ್ರಶ್ನೆ ಮಾಡುತ್ತಾಳೆ. "ಅನುಮಾನ ಇದ್ದರೆ ನೀನೊಂಚೂರು ಕುಡಿದು ನೋಡು" ಎಂದು ವೈಶಾಖಾ ರುಕ್ಕು ಹತ್ತಿರ ಹೇಳುತ್ತಾಳೆ. ಆಗ ಇಲ್ಲ ನಾನು ನಂಬ್ತೀನಿ ಎನ್ನುತ್ತಾ ರುಕ್ಕು ದೂರ ಸರಿಯುತ್ತಾಳೆ.

ಇನ್ನು ಇತ್ತ ಜಾನಕಿ ತನ್ನ ಮೊಮ್ಮಕ್ಕಳ ಬಗ್ಗೆ ಯೋಚನೆ ಮಾಡುತ್ತಿದ್ದಾಳೆ. ಚಾರುವನ್ನು ಕರೆದು ಅವಳಿಗೆ ಹೂ ಮುಡಿಸುತ್ತಾಳ...