ಭಾರತ, ಮಾರ್ಚ್ 24 -- ರಾಮಾಚಾರಿಗೆ ಸಂಕಷ್ಟ ಎದುರಾಗಿದೆ. ತನ್ನ ಜೀವನದಲ್ಲಿ ಹೀಗೊಂದು ತಿರುವು ಬರುತ್ತದೆ ಎಂದು ರಾಮಾಚಾರಿ ಊಹೆನೂ ಮಾಡಿರೋದಿಲ್ಲ. ಆ ರೀತಿ ಬದಲಾವಣೆ ಆಗಲಿದೆ.

ರಾಮಾಚಾರಿಯನ್ನು ಕೆಲವರು ಕೂರಿಸಿಕೊಂಡು ಮಾತಾಡಿಸುತ್ತಿದ್ದಾರೆ. ಅವರು ಇನ್ಯಾರೂ ಅಲ್ಲ ರಾಮಾಚಾರಿ ಕಾಪಾಡಿದ ಹುಡುಗಿಯ ತಂದೆ ಹಾಗೂ ಅವರ ಸಹಾಯಕರು.

ರಾಮಾಚಾರಿಯ ಬಳಿ ನೇರವಾಗಿ ಮದುವೆ ವಿಚಾರ ಮಾತಾಡದೆ ಸುತ್ತಿ ಬಳಸಿ ಮಾತಾಡುತ್ತಾ ಇದ್ದಾರೆ. ಆದರೆ, ರಾಮಾಚಾರಿಗೆ ಸಮಯ ಇರೋದಿಲ್ಲ.

ಅವರು ನಾವು ನಿಮಗೊಂದು ಆಫರ್ ನೀಡುತ್ತೇವೆ ಎನ್ನುವ ರೀತಿ ಮಾತಾಡುತ್ತಾರೆ. ಆದರೆ, ರಾಮಾಚಾರಿಗೆ ಮಾತ್ರ ಏನೂ ಅರ್ಥ ಆಗೋದಿಲ್ಲ.

ನಂತರ ನೇರವಾಗಿ ಕೇಳಿದಾಗ, "ನನ್ನ ಮಗಳು ನಿಮ್ಮನ್ನು ಪ್ರೀತಿಸುತ್ತಿದ್ದಾಳೆ" ಎಂದು ರಾಮಾಚಾರಿ ಕಾಪಾಡಿದ ಹುಡುಗಿಯ ತಂದೆ ಹೇಳುತ್ತಾರೆ.

ಆಗ ರಾಮಾಚಾರಿ ನಗುತ್ತಾ, ಇಲ್ಲ ನನಗೆ ಮದುವೆ ಆಗಿದೆ ಎಂದು ಹೇಳುತ್ತಾನೆ. ಅದನ್ನು ಕೇಳಿ ಅವರೆಲ್ಲರಿಗೂ ಬೇಸರ ಆಗುತ್ತದೆ.

ಅಷ್ಟರಲ್ಲಿ ರಾಮಾಚಾರಿಗೊಂದು ಫೋನ್‌ ಬರುತ್ತದೆ. ಅವನು ಮಾತಾಡಿ ಮುಗಿಸಿದ ನಂತ...