ಭಾರತ, ಮಾರ್ಚ್ 9 -- ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಕೋಪ ಮಾಡಿಕೊಂಡಿದ್ದಾಳೆ. ರಾಮಾಚಾರಿ ಪ್ರೀತಿ ಮಾಡುತ್ತಿಲ್ಲ ಎನ್ನುವುದು ಅವಳ ವಾದ.

ನಾನು ನಿಮ್ಮನ್ನು ತುಂಬಾ ಪ್ರೀತಿ ಮಾಡ್ತೀನಿ ಎಂದು ರಾಮಾಚಾರಿ ಹೇಳಿದ್ದಾನೆ. ಆದರೆ, ಆ ಪ್ರೀತಿ ನಿನ್ನ ಮನಸಿನಿಂದ ಬರುತ್ತಿಲ್ಲ ಎಂದು ಚಾರು ಹೇಳುತ್ತಿದ್ದಾಳೆ.

ರಾಮಾಚಾರಿ ಆಗ ಚಾರುಗೆ ಸಮಾಧಾನ ಮಾಡುತ್ತಾ, "ನೀವೆ ನನಗೆ ಪ್ರೀತಿ ಮಾಡಿ, ನೀವು ಈ ವಿಷಯದಲ್ಲಿ ನನ್ನ ಟೀಚರ್" ಎಂದು ಹೇಳಿದ್ದಾನೆ.

ಇತ್ತ ರುಕ್ಕು ವೈಶಾಖಾಳನ್ನು ಕಾವಲು ಕಾಯುತ್ತಾ ಕುಳಿತಿದ್ದಾಳೆ. ವೈಶಾಖಾ ಮಣ್ಣಿನಲ್ಲಿ ಹುದುಗಿದ್ದಾಳೆ. ತನ್ನ ಮೈಗೆ ವಿಷ ಏರಿದೆ ಎಂದು ವೈಶಾಖಾ ಅಂದುಕೊಂಡಿದ್ದಾಳೆ.

ಮಣ್ಣಿನಲ್ಲಿ ಈ ರೀತಿ ತನ್ನ ಇಡೀ ದೇಹವನ್ನು ಹುದುಗಿಸಿಕೊಂಡರೆ, ವಿಷ ಇಳಿಯುತ್ತದೆ ಎಂದು ಅವಳು ಅಂದುಕೊಂಡಿದ್ದಾಳೆ.

ಅದೂ ಅಲ್ಲದೆ ಚಾರು ಸ್ವಾಮಿ ವೇಷ ಧರಿಸಿ ಮಣ್ಣಿನಲ್ಲಿ ಹುದುಗು ಎಂದು ಹೇಳಿದ್ದಾಳೆ. ಆದರೆ ವೈಶಾಖಾಳಿಗೆ ಮಣ್ಣಿನಲ್ಲಿರುವಾಗ ತೊಂದರೆ ಆಗುತ್ತಿದೆ.

ವೈಶಾಖಾ ಹೇಳುತ್ತಾಳೆ "ನನಗೆ ಇಲ್ಲಿರೋಕೆ ಆಗ್ತಾ ಇಲ್ಲ, ...