ಭಾರತ, ಮಾರ್ಚ್ 18 -- ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ತಲೆಕೆಡಿಸಿಕೊಂಡಿದ್ದಾಳೆ. ಸಾಕಷ್ಟು ಬಾರಿ ಯೋಚನೆ ಮಾಡಿದರೂ ಸಹ ಕಿಟ್ಟಿ ಮಾಡಿದ್ದು ತಪ್ಪು ಎಂದೇ ಜಾನಕಿಗೆ ಅನಿಸುತ್ತಿದೆ. ಮನೆಯವರೆಲ್ಲರೂ ಸಮಾಧಾನದಲ್ಲಿ ಇರುವ ಸಂದರ್ಭದಲ್ಲಿ ಕಿಟ್ಟಿ ಹಾಗೂ ರುಕ್ಕು ಮಾತು ಬಿರುಗಾಳಿಯಂತೆ ಆವರಿಸಿದೆ. ಆ ಕಾರಣಕ್ಕಾಗಿ ಜಾನಕಿ ತುಂಬಾ ಸಂಕಟಪಡುತ್ತಿದ್ದಾಳೆ. ಯಾಕೆಂದರೆ ರುಕ್ಮಿಣಿ ಮತ್ತು ಕೃಷ್ಣ ಇಬ್ಬರೂ ನಮಗೆ ಈ ಮನೆಯಲ್ಲಿ ಪಾಲು ಬೇಕು ಎಂದು ಕೇಳುತ್ತಾರೆ. ಮನೆಯಲ್ಲಿ ಹಿರಿಯರು ಇಲ್ಲ ಎಂದು ಹೇಳಿದರೂ ಕೇಳದೆ ಮನೆ ಬಿಟ್ಟು ಹೋಗಿದ್ದಾರೆ. ಇದರಿಂದ ಜಾನಕಿಗೆ ನೋವಾಗಿದೆ.

ರಾಮಾಚಾರಿ ಹಾಗೂ ಮನೆಯವರೆಲ್ಲರೂ ಸಹ ಒಟ್ಟಾಗಿ ಕುಳಿತುಕೊಂಡು ಆಲೋಚನೆ ಮಾಡುತ್ತಾ ಇರುತ್ತಾರೆ. ಯಾಕೆ ಹೀಗೆಲ್ಲ ಆಯ್ತು ಎಂದು ಎಲ್ಲರ ಮನಸಿನಲ್ಲೂ ಪ್ರಶ್ನೆ ಇರುತ್ತದೆ. ಆದರೆ ಏನು ಮಾಡುವುದು ಎಂದು ತೋಚದೆ ಎಲ್ಲರೂ ತಮ್ಮಷ್ಟಕ್ಕೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾ ಇರುತ್ತಾರೆ. ಆದರೆ ಜಾನಕಿ ಅಳು ಮಾತ್ರ ನಿಲ್ಲುತ್ತಿಲ್ಲ. "ಕೃಷ್ಣ ಚಿಕ್ಕವನಿದ್ದಾಗಲೇ ಮನೆಯಿಂದ ದೂರ...