ಭಾರತ, ಫೆಬ್ರವರಿ 4 -- Ramachari Serial: ರಾಮಾಚಾರಿ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ರಾಮಾಚಾರಿ ತಾಯಿ ಜಾನಕಿ ಹಾಗೂ ತಂಗಿ ಶ್ರುತಿ ಇಬ್ಬರೂ ತುಂಬಾ ಬೇಸರದಲ್ಲಿದ್ದಾರೆ. ಶ್ರುತಿ ಅಂದುಕೊಂಡಿದ್ದೊಂದು, ಆದರೆ ಈಗ ಆಗಿದ್ದೇ ಇನ್ನೊಂದು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಜಾನಕಿ ಮತ್ತು ಶ್ರುತಿ ಇಬ್ಬರೂ ಸೇರಿಕೊಂಡು ಮನೆಯಲ್ಲಿ ಯಾರಿಗೂ ತಿಳಿಯದ ಹಾಗೆ ಶ್ರುತಿ ಪ್ರೀತಿಸಿದ ಹುಡುಗನನ್ನು ಭೇಟಿ ಮಾಡಲು ಹೋಗುತ್ತಾರೆ. ಅವನನ್ನು ಭೇಟಿಯಾಗುತ್ತಾರೆ. ಶ್ರುತಿ ಬದಲಾಗಿ ಮೊದಲು ಜಾಕಿನೇ ಮಾತಾಡುತ್ತಾಳೆ. ನೀವು ಪ್ರೀತಿಸಿದ್ದೀರಿ ನಿಜ, ಆದರೆ ಎಲ್ಲರ ಎದುರು ಮದುವೆ ಕೂಡ ಆಗಬೇಕು ಎಂದು ಹೇಳುತ್ತಾಳೆ. ಆದರೆ ಅವನ ಮಾತಿನಲ್ಲಿ ಮದುವೆಯ ಬಗ್ಗೆ ಬಂದ ವಿಚಾರವೇ ಬೇರೆ.

ಶ್ರುತಿ ಅವನನ್ನು ನಂಬಿಕೊಂಡು ಅವನೊಟ್ಟಿಗೆ ತನ್ನ ಮನಸು ಮಾತ್ರವಲ್ಲ, ದೇಹವನ್ನೂ ಹಂಚಿಕೊಂಡಿದ್ದಾಳೆ. ಆ ಕಾರಣದಿಂದ ಇಂದು ಅವಳ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ. ಆ ವಿಚಾರವನ್ನೂ ಸಹ ಅವಳು ಅವನ ಮುಂದೆ ಹೇಳುತ್ತಾಳೆ. ಆದರೆ ಶ್ರುತಿಯ ಗೆಳೆಯ ತನಗೂ ಈ ವಿಚಾರ...