ಭಾರತ, ಮಾರ್ಚ್ 28 -- ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಹಾಗೂ ಚಾರು ಇಬ್ಬರೂ ಒಂದಾಗುವ ಸಮಯ ಬಂದಾಗಲೆಲ್ಲ ಒಂದಲ್ಲ ಒಂದು ವಿಘ್ನ ಎದುರಾಗುತ್ತಲೇ ಇರುತ್ತದೆ. ಈ ಬಾರಿ ರಾಮಾಚಾರಿ ಬಾಳಿನಲ್ಲಿ ಇನ್ಯಾರೋ ಬರುವ ಸೂಚನೆ ಸಿಕ್ಕಿದೆ. ಈ ಹಿಂದೆ ಕೂಡ ರಾಮಾಚಾರಿಯನ್ನು ಇನ್ನೊಬ್ಬ ಹುಡುಗಿ ಪ್ರೀತಿಸುತ್ತಿದ್ದಾಳೆ ಎನ್ನುವ ವಿಚಾರ ಪ್ರಸ್ತಾಪವಾಗಿತ್ತು. ಆದರೆ, ಇದೀಗ ರಾಮಾಚಾರಿಯನ್ನು ಪ್ರೀತಿ ಮಾಡುತ್ತಿರುವ ಹುಡುಗಿ ಹಾಗೂ ಚಾರು ಇಬ್ಬರೂ ಒಂದೇ ಜಾಗದಲ್ಲಿ ಬಂದು ಸೇರಿದ್ದಾರೆ. ಚಾರು ತರಕಾರಿ ತೆಗೆದುಕೊಳ್ಳಲು ಬಂದಿರುತ್ತಾಳೆ. ಅದೇ ಸಮಯಕ್ಕೆ ರಾಮಾಚಾರಿಯನ್ನು ಪ್ರೀತಿ ಮಾಡುತ್ತಿರುವ ಹುಡುಗಿ ಕೂಡ ಅದೇ ದಾರಿಯಲ್ಲಿ ಬರುತ್ತಾಳೆ. ಯಾರೋ ತುಂಬಾ ವಯಸ್ಸಾದವರೊಬ್ಬರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಾ ಇರುತ್ತಾರೆ. ಅದೇ ಸಮಯಕ್ಕೆ ವೇಗವಾಗಿ ಕಾರೊಂದು ಬರುತ್ತಿರುತ್ತದೆ.

ಚಾರು ವೇಗವಾಗಿ ಬರುತ್ತಿದ್ದ ಕಾರನ್ನು ನೋಡಿ, ಆ ಅಜ್ಜಿ ಈಗ ಕಾರಿಗೆ ಡಿಕ್ಕಿ ಹೊಡೆಯುತ್ತಾರೆ ಎಂದು ಭಾವಿಸಿ ತಪ್ಪಿಸಲು ಓಡಿ ಹೋಗುತ್ತಾಳೆ. ಆಗುವ ಅಪಘಾತವಂತು ತಪ್ಪುತ್ತ...