ಭಾರತ, ಮಾರ್ಚ್ 7 -- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಮಾರು ವೇಷದಲ್ಲಿ ಬಂದಿದ್ದಾಳೆ. ಸ್ವಾಮಿ ರೀತಿ ಉಡುಪು ತೊಟ್ಟುಕೊಂಡು ರಾಮಾಚಾರಿ ಮನೆಮುಂದೆ ಬಂದಿದ್ದಾಳೆ. ಜಾನಕಿ ಸಿಕ್ಕಾಗ ಅವಳಿಗೆ ಈ ಮನೆಯ ಬಗ್ಗೆ ತನಗೆಲ್ಲ ಗೊತ್ತು ಎಂದಿದ್ದಾಳೆ. ಹಾಗೇ ಜಾನಕಿ ಒಂದಷ್ಟು ಪ್ರಶ್ನೆ ಕೇಳಿದ್ದಾಳೆ. ಅದಕ್ಕೆಲ್ಲ ಚಾರು ಸರಿಯಾಗಿ ಉತ್ತರಿಸಿದ್ದಾಳೆ. ಹೀಗಿರುವಾಗ ರಾಮಾಚಾರಿಯನ್ನು ಹೊರಗಡೆ ಕರೆದುಕೊಂಡು ಬರಬೇಕು ಎಂದು ಜಾನಕಿ ಒತ್ತಾಯ ಮಾಡುತ್ತಾಳೆ. ಆದರೆ, ಕೆಲಸ ಮಾಡುತ್ತಿದ್ದ ರಾಮಾಚಾರಿ ಮಾತ್ರ ಲ್ಯಾಪ್‌ಟಾಪ್ ಬಿಟ್ಟು ಹೊರಗಡೆ ಬರುವ ರೀತಿ ಕಾಣಿಸುವುದಿಲ್ಲ. ಅವನು "ಇಲ್ಲ ಅಮ್ಮ ನಾನು ಹೊರಗಡೆ ಬರೋದಿಲ್ಲ, ನನಗೆ ತುಂಬಾ ಕೆಲಸ ಇದೆ" ಎನ್ನುತ್ತಾನೆ. ಆದರೆ ಜಾನಕಿ ಅವನ ಮಾತು ಕೇಳುವ ಹಂತದಲ್ಲಿ ಇರುವುದಿಲ್ಲ.

"ನೀನು ಹೊರಗಡೆ ಬರಲೇಬೇಕು, ಅವರು ನಮ್ಮ ಮನೆಯ ಬಗ್ಗೆ ಎಲ್ಲವನ್ನೂ ಕಣ್ಣಿಗೆ ಕಂಡ ಹಾಗೆ ಹೇಳುತ್ತಿದ್ದಾರೆ" ಎಂದು ಒತ್ತಾಯ ಮಾಡುತ್ತಾಳೆ. ಕೈ ಹಿಡಿದು ಎಳೆಯುತ್ತಾಳೆ. ಆಗ ಅವಳ ಒತ್ತಾಯಕ್ಕೆ ಮಣಿದ ರಾಮಾಚಾರಿ ಹೊರಗಡ...