ಭಾರತ, ಫೆಬ್ರವರಿ 26 -- ಜಾನಕಿ ಚಾರುವನ್ನು ಕೂರಿಸಿಕೊಂಡು ಕೆಲವು ವಿಷಯಗಳ ಬಗ್ಗೆ ಮಾತಾಡುತ್ತಾ ಇದ್ದಾಳೆ. ರಾಮಾಚಾರಿ ಹಾಗೂ ಚಾರು ಬಗ್ಗೆಯೇ ಮಾತುಕತೆ ನಡೆಯುತ್ತಿದೆ.

ಚಾರು ಹತ್ತಿರ ಮಾತಾಡುತ್ತಾ ಜಾನಕಿ ನಿಮಗೆ ಗಂಡು ಮಗು ಬೇಕಾ? ಹೆಣ್ಣು ಮಗುನಾ? ಎಂದು ಪ್ರಶ್ನೆ ಮಾಡುತ್ತಾಳೆ. ಆಗ ಚಾರು ಯಾವ ಮಗುವಾದರೂ ತೊಂದರೆ ಇಲ್ಲ ಎನ್ನುತ್ತಾಳೆ.

ಚಾರು ತುಂಬಾ ದಿನಗಳಿಂದಲೂ ತನಗೊಂದು ಮಗು ಬೇಕು ಎಂದು ಅಂದುಕೊಳ್ಳುತ್ತಲೇ ಇದ್ದಳು. ಆದರೆ, ಕಾಲ ಕೂಡಿ ಬಂದಿರಲಿಲ್ಲ. ಈಗ ಮಕ್ಕಳ ಬಗ್ಗೆ ಹೆಚ್ಚು ಆಲೋಚನೆ ಮಾಡುತ್ತಿದ್ದಾಳೆ.

ವೈಶಾಖಾ ಹಾಗೂ ರುಕ್ಕು ಇಬ್ಬರೂ ಸಹ ದಾರಿಯಲ್ಲಿ ನಡೆದುಕೊಂಡು ಎಲ್ಲಿಗೋ ಹೋಗುತ್ತಾ ಇರುತ್ತಾರೆ. ವೈಶಾಖಾಳ ಮೈಗೆ ತುರಿಕೆಯಾಗಿ ತುಂಬಾ ತೊಂದರೆಯಲ್ಲಿರುತ್ತಾಳೆ.

ಆಗ ದಾರಿ ಮಧ್ಯದಲ್ಲಿ ಬಿಕ್ಷುಕನೊಬ್ಬ ಸಿಕ್ಕಿ "ನಾನು ಊಟ ಮಾಡಿ ಮೂರು ದಿನ ಆಯ್ತು, ಏನಾದ್ರೂ ಬಿಕ್ಷೆ ಹಾಕಿ" ಎಂದು ಕೇಳುತ್ತಾನೆ.

ಅವನನ್ನು ಕಂಡು ವೈಶಾಖಾ ಹಾಗೂ ರುಕ್ಕು ಇಬ್ಬರೂ ದೂರ ಸರಿಯುತ್ತಾರೆ. ಅವನ ಮೈಯ್ಯಿಂದ ತುಂಬಾ ಕೆಟ್ಟ ವಾಸನೆ ಬರುತ್ತಿದೆ ...