ಭಾರತ, ಮಾರ್ಚ್ 23 -- ರಾಮಾಚಾರಿ ಧಾರಾವಾಹಿಯಲ್ಲಿ ರಾಮಾಚಾರಿ ಮತ್ತು ಚಾರು ಇಬ್ಬರೂ ಪ್ರೀತಿಯಿಂದಲೇ ಇದ್ದರೂ ಸಹ ಚಾರು ಮನಸಿನಲ್ಲಿ ಆತಂಕ ಶುರುವಾಗಿದೆ. ಯಾಕೋ ಎಲ್ಲೋ ಏನೋ ಮಿಸ್‌ ಆಗ್ತಿದೆ ಎನ್ನುವ ಭಾವನೆ ಚಾರು ಮನಸಿನ ಆಳದಲ್ಲಿ ಶುರುವಾಗಿದೆ. ನನ್ನನ್ನು ಬಿಟ್ಟು ಇನ್ಯಾರೋ ರಾಮಾಚಾರಿ ಜೀವನದಲ್ಲಿ ಬರುತ್ತಾರೆ ಎಂದು ಚಾರು ಮನಸಿಗೆ ಬಲವಾಗಿ ಅನಿಸಲು ಆರಂಭವಾಗಿದೆ. ಅದೇ ಕಾರಣಕ್ಕೆ ಚಾರು ತುಂಬಾ ಬೇಸರ ಮಾಡಿಕೊಂಡು ರಾಮಾಚಾರಿ ಹತ್ತಿರ ಮಾತಾಡುತ್ತಾ ಇದ್ದಾಳೆ. ಆದರೆ ರಾಮಾಚಾರಿಗೆ ಮುಂದೇನಾಗಬಹುದು ಎಂಬುದರ ಯಾವ ಸುಳಿವೂ ಸಿಕ್ಕಿಲ್ಲ. ಅವನು ಆರಾಮಾಗಿದ್ದಾನೆ.

ಇತ್ತ ಮಾನ್ಯತಾ ಮತ್ತು ರುಕ್ಕು ಇಬ್ಬರೂ ಒಟ್ಟಾಗಿ ಸೇರಿದ್ದಾರೆ. ರುಕ್ಕು, ವೈಶಾಖಾಳನ್ನು ತನ್ನ ಬಳಿ ಸೇರಿಸಿಕೊಳ್ಳದೆ ತಾನೊಬ್ಬಳೇ ಹೋಗಿ ಮಾನ್ಯತಾಳನ್ನು ಭೇಟಿ ಆಗಿದ್ದಾಳೆ. ಸಾಕಷ್ಟು ಬಾರಿ ಯೋಚನೆ ಮಾಡಿಯೇ ರುಕ್ಕು ಈ ನಿರ್ಧಾರ ತೆಗೆದುಕೊಂಡಿರುತ್ತಾಳೆ. ಮಾನ್ಯತಾಳಿಗೆ ರುಕ್ಕು ಯಾರು ಎಂಬ ಸತ್ಯ ಗೊತ್ತಿರುವುದಿಲ್ಲ. ಮಾನ್ಯತಾ ಮೊದಲು ರುಕ್ಕುವನ್ನು "ನೀನ್ಯಾರು?" ಎಂದು ಪ್ರ...