ಭಾರತ, ಫೆಬ್ರವರಿ 1 -- Ramachari Serial: ರಾಮಾಚಾರಿ ಧಾರಾವಾಹಿಯಲ್ಲಿ ಜಾನಕಿ ತುಂಬಾ ಬೇಸರ ಮಾಡಿಕೊಂಡಿದ್ದಾರೆ. ಶ್ರುತಿಯನ್ನು ನೋಡಲು ಬಂದ ಗಂಡಿನ ಕಡೆಯವರಿಗೆ ಅವಳು ತುಂಬಾ ಅವಮಾನ ಮಾಡಿದ್ದಾಳೆ. ಆ ಸಂಗತಿ ಅವಳಿಗೂ ಗೊತ್ತಿದೆ. ಅದೇ ಕಾರಣಕ್ಕೆ ಅವಳೊಬ್ಬಳೇ ಅಳುತ್ತಾ ಕುಳಿತಿದ್ದಾಳೆ. ಇನ್ನು ಇತ್ತ ರಾಮಾಚಾರಿ ಹಾಗೂ ಚಾರು ಇಬ್ಬರೂ ಅಮ್ಮ ಯಾಕೆ ಆ ರೀತಿ ಮಾತಾಡಿದ್ರು ಎಂದು ಆಲೋಚನೆ ಮಾಡುತ್ತಾ ಇರುತ್ತಾರೆ. ಮಾತನಾಡುವ ಭರದಲ್ಲಿ ಅವಳು ಚಾರುಗೂ ಬೈದಿದ್ದಾಳೆ. ಆ ಕಾರಣಕ್ಕಾಗಿ ರಾಮಾಚಾರಿ ತನ್ನ ಪತ್ನಿ ಚಾರುಗೆ ಸಮಾಧಾನ ಮಾಡುತ್ತಾನೆ. ಆದರೆ ಚಾರು ತನಗಾದ ಬೇಸರವನ್ನು ತೋರಿಸಿಕೊಳ್ಳುವುದಿಲ್ಲ.

ಅವಳು ರಾಮಾಚಾರಿ ಹತ್ತಿರ ನಾವು ಅತ್ತೆಯನ್ನು ಯಾಕೆ ಈ ರೀತಿ ಮಾಡಿದ್ರಿ ಎಂದು ಪ್ರಶ್ನಿಸಬೇಕು ಎಂದು ಹೇಳುತ್ತಾಳೆ. ನಂತರ ಅವರಿಬ್ಬರೂ ಜಾನಕಿ ಹತ್ತಿರ ಮಾತಾಡಲು ಹೋಗುತ್ತಾರೆ. ಅಷ್ಟರಲ್ಲಾಗಲೇ ನಾರಾಯಣಾಚಾರ್ಯರು ಮಾತಾಡುತ್ತಾ ಇರುತ್ತಾರೆ. "ಜಾನಕಿ ಯಾಕೆ ನೀನು ಗಂಡಿನ ಕಡೆಯವರಿಗೆ ಅವಮಾನ ಮಾಡಿದೆ. ಮದುವೆಯಾದಾಗಿನಿಂದ ಒಂದು ದಿನವೂ ನನಗೆ ಎ...