ಭಾರತ, ಮಾರ್ಚ್ 10 -- ರಾಮಾಚಾರಿ ಧಾರಾವಾಹಿಯಲ್ಲಿ ವೈಶಾಖಾ ಕಷ್ಟಪಡುತ್ತಿದ್ದಾಳೆ. ಚಾರು ಮಾರು ವೇಷದಲ್ಲಿ ಬಂದು ಹೇಳಿದ ಮಾತನ್ನು ಅನುಸರಿಸುತ್ತಿದ್ದಾಳೆ.

ರುಕ್ಕು ವೈಶಾಖಾಳಿಗೆ ಸಹಾಯ ಮಾಡುತ್ತಾ ಇದ್ದಾಳೆ. ಮಣ್ಣಿನ ಗುಂಡಿ ತೋಡಿ ಅದರಲ್ಲಿ ವೈಶಾಖಾ ಕುಳಿತಿರುತ್ತಾಳೆ.

ಗೋಧೂಳಿ ಮುಹೂರ್ತ ಹತ್ತಿರ ಬರುತ್ತಿದ್ದಂತೆ ರುಕ್ಕು ಗುಣಿಯಿಂದ ವೈಶಾಖಾಳನ್ನು ಮೇಲಕ್ಕೆ ಎತ್ತಿದ್ದಾಳೆ. ವೈಶಾಖಾ ಮೇಲೆ ಬಂದ ಕ್ಷಣದಿಂದ ಮತ್ತೆ ಚಾರುಗೆ ಹೇಗೆ ಕೇಡುಂಟು ಮಾಡುವುದು ಎಂದೇ ಆಲೋಚಿಸುತ್ತಾಳೆ.

ಇತ್ತ ರಾಮಾಚಾರಿ ಮತ್ತು ಚಾರು ಇಬ್ಬರೂ ತುಂಬಾ ಸಂತೋಷದಿಂದ ತಮ್ಮ ಸಮಯ ಕಳೆಯುತ್ತಾ ಇರುತ್ತಾರೆ.

ರಾಮಾಚಾರಿ, ಚಾರುಗೆ ಊಟ ಮಾಡಿಸುತ್ತಾ ಇರುತ್ತಾನೆ. ಚಾರು ಪ್ರೀತಿಯಿಂದ ಅವನೊಡನೆ ಮಾತಾಡುತ್ತಾ ಇರುತ್ತಾಳೆ.

"ಯಾಕೋ ನನ್ನೊಳಗೆ ಇನ್ನೊಂದು ಜೀವ ಇದೆ ಎಂದು ಅನಿಸುತ್ತಿದೆ" ಎನ್ನುತ್ತಾಳೆ. ರಾಮಾಚಾರಿಗೆ ಆ ಮಾತು ಕೇಳಿ, ಅದೇ ನಿಜವಾಗಲಿ ನಾನು ಅಪ್ಪನಾಗಲಿ ಎನಿಸುತ್ತದೆ.

ಈಗ ಮತ್ತೆ ರಾಮಾಚಾರಿ ಹಾಗೂ ಚಾರು ಖುಷಿಯನ್ನು ತಾನು ಹೇಗೆ ಕಸಿದುಕೊಳ್ಳಬೇಕು ಎಂದು ...