ಭಾರತ, ಜನವರಿ 28 -- ರಾಮಾಚಾರಿ ಧಾರಾವಾಹಿಯಲ್ಲಿ ಜೈಲಿನಿಂದ ಮತ್ತೆ ಮನೆಗೆ ಬಂದ ವೈಶಾಖಾ ತನ್ನ ಹಳೆ ಬುದ್ದಿಯನ್ನೇ ಮುಂದುವರೆಸಿದ್ದಾಳೆ. ಚಾರು ಜೀವನದಲ್ಲಿ ಮತ್ತೆ ಇವಳೊಂದು ಮುಳ್ಳಾಗಿ ಬಂದಿದ್ದಾಳೆ. ವೈಶಾಖಾ ಹೇಳಿದ ಪ್ರಕಾರ ಅವಳು ರಾಮಾಚಾರಿಯನ್ನು ಕೊಲ್ಲಲು ಬಯಸಿದ್ದಳು. ಆದರೆ ಅವಳ ಉಪಾಯ ಬದಲಿಸಿ ಅವನನ್ನು ಜೀವಂತ ಉಳಿಸಿದ್ದಾಳೆ. ರಾಮಾಚಾರಿ ದಾರಿಯಲ್ಲಿ ಹೋಗುವಾಗ ಅವನಿಗೆ ಯಾರಾದರೂ ಆಕ್ಸಿಡೆಂಟ್ ಮಾಡಿ ಸಾಯಿಸಬಹುದು ಎಂದು ಅಂದುಕೊಂಡ ಚಾರು ಅವನ ಹಿಂದಿನಿಂದ ಆಟೋ ಮಾಡಿಕೊಂಡು ಹೋಗುತ್ತಾಳೆ. ಆದರೆ ಅವನಿಗೆ ಏನೂ ಆಗಿರೋದಿಲ್ಲ.

ಯಾರೋ ಬೇರೆಯವರಿಗೆ ಆಕ್ಸಿಡೆಂಟ್ ಆಗಿದೆ ಎಂದು ಅವನು ತನ್ನ ಗಾಡಿಯನ್ನು ಬಿಟ್ಟು ಅವರಿಗೆ ಸಹಾಯ ಮಾಡಲು ಹೋಗಿರುತ್ತಾನೆ. ಅದರೆ ಚಾರು ಅಂದುಕೊಂಡಿದ್ದೇ ಬೇರೆಯಾಗಿರುತ್ತದೆ. ಆ ನಂತರ ರಾಮಾಚಾರಿ ನೇರವಾಗಿ ಚಾರು ಹತ್ತಿರ ಬರುತ್ತಾನೆ. ಬಂದು ಅವಳನ್ನು ವಿಚಾರಿಸುತ್ತಾನೆ. "ಮೇಡಂ ಯಾಕೆ ನೀವಿಷ್ಟು ಭಯದಿಂದಿದ್ದೀರಿ? ಏನಾಯ್ತು?" ಎಂದು ಪ್ರಶ್ನೆ ಮಾಡುತ್ತಾನೆ. ಆಗ ಚಾರು ಎಲ್ಲವನ್ನೂ ವಿವರಿಸುತ್ತಾಳೆ. "ನೀನು ...