ಭಾರತ, ಫೆಬ್ರವರಿ 5 -- Ramacahari Serial: ರಾಮಾಚಾರಿ ಧಾರಾವಾಹಿಯಲ್ಲಿ ನಾರಾಯಣಾಚಾರ್ಯರು ತನ್ನ ಮಗಳ ಬಗ್ಗೆ ತುಂಬಾ ಹೆಮ್ಮೆಯಿಂದ ಬದುಕುತ್ತಿದ್ದಾರೆ. ಆದರೆ ಅವಳು ಯಾವ ರೀತಿ ಕೆಲಸ ಮಾಡಿದ್ದಾಳೆ ಎಂದು ಅವರಿಗಿನ್ನೂ ಅರ್ಥ ಆಗಿಲ್ಲ. ಯಾಕೆಂದರೆ ಆ ವಿಷಯ ಹೊರಗಡೆ ಬರದಂತೆ ಜಾನಕಿ ತಡೆ ಗೋಡೆಯಾಗಿ ನಿಂತಿದ್ದಾಳೆ. ಶ್ರುತಿ ಯಾರೋ ಒಬ್ಬನನ್ನು ಲವ್ ಮಾಡಿ ಈಗ ಗರ್ಭಿಣಿಯೂ ಆಗಿದ್ದಾಳೆ. ಮದುವೆಗೂ ಮುನ್ನವೇ ಹೀಗೆಲ್ಲ ಆಗಿದೆ ಎಂದರೆ ನಾರಾಯಣಾಚಾರ್ಯರು ಖಂಡಿತ ಸುಮ್ಮನೆ ಇರೋದಿಲ್ಲ ಎಂದು ಜಾನಕಿ ಶ್ರುತಿಗೆ ಹೇಳುತ್ತಿದ್ದಾಳೆ. ಯಾರೋ ಗಂಡಿನ ಕಡೆಯವರು ಶ್ರುತಿ ಬಗ್ಗೆ ಒಂದು ಮಾತೂ ವಿಚಾರಿಸದೆ ಸೊಸೆ ಮಾಡಿಕೊಳ್ಳುತ್ತೇವೆ ಎಂದು ಬಂದಿದ್ದರು. ಅದೇ ವಿಚಾರವಾಗಿ ನಾರಾಯಣಾಚಾರ್ಯರು ಈಗ ಶ್ರುತಿ ಬಳಿ ಮಾತಾಡುತ್ತಿದ್ದಾರೆ.

"ಮೊಬೈಲ್ ಒಂದು ಮಾಯೆ. ಅದನ್ನು ಎಷ್ಟು ಬೇಕೋ ಅಷ್ಟೇ ಬಳಸಬೇಕು. ಅದಕ್ಕಿಂತ ಹೆಚ್ಚಾಗಿ ಬಳಸಿದರೆ ಅಪಾಯ ಎನ್ನುವುದು ಕಟ್ಟಿಟ್ಟ ಬುತ್ತಿ ಎಂದು ಮತ್ತೊಮ್ಮೆ ಹೇಳುತ್ತಿದ್ದಾರೆ. ಆದರೆ ನಿನಗೆ ಅಂದು ನಾನು ಹೇಳಿದ ಮಾತು ಸರಿ ಅನಿ...