Bengaluru, ಮಾರ್ಚ್ 26 -- Rama Navami 2025: ಹಿಂದೂಗಳಲ್ಲಿ ಪ್ರತಿ ಹಬ್ಬಗಳ ಆಚರಣೆಗೆ ಬಹಳ ಮಹತ್ವವಿದೆ. ಯುಗಾದಿಯ ನಂತರ ಬರುವ, ಹಿಂದೂಗಳ ಹೊಸ ವರ್ಷದ ಎರಡನೇ ಹಬ್ಬವಾದ ಶ್ರೀರಾಮ ನವಮಿಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಮರ್ಯಾದ ಪುರುಷೋತ್ತಮ ಶ್ರೀರಾಮ ಜನಿಸಿದ ದಿನವನ್ನು ರಾಮ ನವಮಿಯನ್ನಾಗಿ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಅಂದು ಪಾನಕ, ಮಜ್ಜಿಗೆ ಹಾಗೂ ಕೋಸಂಬರಿಯನ್ನು ಹಂಚಿ ಸಂಭ್ರಮಿಸಲಾಗುತ್ತದೆ. 2025ರ ಶ್ರೀರಾಮ ನವಮಿ ಯಾವಾಗ, ಶುಭ ಮುಹೂರ್ತ ಹಾಗೂ ಮಹತ್ವವನ್ನು ತಿಳಿಯೋಣ.

ಈ ವರ್ಷ (2025) ಏಪ್ರಿಲ್‌ 6ರ ಭಾನುವಾರ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತದೆ. ಶ್ರೀರಾಮನು ಈ ದಿನ ಜನಿಸಿದನು ಎಂಬ ಕಾರಣಕ್ಕೆ ಭಕ್ತರು ಶ್ರೀರಾಮ ನವಮಿ ಆಚರಿಸುತ್ತಾರೆ. ಈ ದಿನ ಶ್ರೀರಾಮನೊಂದಿಗೆ ದುರ್ಗಾಮಾತೆಯನ್ನು ಕೂಡ ಪೂಜಿಸುವ ವಾಡಿಕೆ ಇದೆ. ಮನೆ ಹಾಗೂ ರಾಮನ ದೇವಾಲಗಳಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ.

ರಾಮ ನವಮಿಯ ಶುಭ ಮುಹೂರ್ತ: ಏಪ್ರಿಲ್ 6ರ ಬೆಳಗ್ಗೆ 11 08 ರಿಂದ ಮಧ್ಯಾಹ್ನ 1.39 ರವರಿಗೆ ಇರುತ್ತ...