Hyderabad, ಮಾರ್ಚ್ 27 -- ಮರ್ಯಾದ ಪುರುಷ ಶ್ರೀರಾಮನ ಜನ್ಮ ದಿನವನ್ನು ರಾಮ ನವಮಿಯನ್ನಾಗಿ ಆಚರಿಸಲಾಗುತ್ತದೆ. ಭಗವಾನ್ ಶ್ರೀರಾಮನ ಶ್ರೇಷ್ಠತೆಯ ಬಗ್ಗೆ ಹೇಳಲು ಬಹಳಷ್ಟು ಇದೆ. ವಿಶೇಷವಾಗಿ ರಾಮನನ್ನು ಪೂಜಿಸುವುದರಿಂದ ಸಂತೋಷ ಮತ್ತು ಸಮೃದ್ಧಿಯ ಜೊತೆಗೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು ಎಂಬುದು ಭಕ್ತರ ನಂಬಿಕೆಯಾಗಿದೆ. ಶ್ರೀ ರಾಮ ನವಮಿಯ ದಿನದಂದು, ಶ್ರೀ ರಾಮನ ಮಂತ್ರಗಳನ್ನು ಪಠಿಸಿದರೆ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ರಾಮನ ಜೊತೆಗೆ ಹನುಮಂತನ ಆಶೀರ್ವಾದವೂ ನಿಮಗೆ ಸಿಗುತ್ತದೆ. ರಾಮನ ಸ್ತೋತ್ರಗಳನ್ನು ಪಠಿಸಿದರೆ ಶಾಂತಿ, ಸಂತೋಷ ಹಾಗೂ ಸಮೃದ್ಧಿ ಸಿಗುತ್ತದೆ ಎಂಬುದು ಭಕ್ತರ ನಂಬಿಕೆಯಾಗಿದೆ. ಶ್ರೀರಾಮ ನವಮಿ ಯಾವಾಗ ಹಾಗೂ ಶುಭ ಫಲಗಳಿಗಾಗಿ ಅಂದು ಪಠಿಸಬೇಕಾದ ಸ್ತೋತ್ರಗಳನ್ನು ಇಲ್ಲಿ ನೀಡಲಾಗಿದೆ.

ಈ ವರ್ಷ ಅಂದರೆ 2025 ರಲ್ಲಿ ರಾಮ ನವಮಿ ಯಾವಾಗ, ಚೈತ್ರ ಮಾಸದ ಶುಕ್ಲ ಪಕ್ಷದ ನವಮಿಯ ದಿನಾಂಕವು ಏಪ್ರಿಲ್ 05 ರಂದು ಸಂಜೆ 07:26 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 06 ರಂದು ಸಂಜೆ 07:22 ಕ್ಕೆ ಕೊನೆಗೊಳ್ಳುತ...