Bengaluru, ಏಪ್ರಿಲ್ 4 -- ಹಿಂದೂಗಳ ಹೊಸ ವರ್ಷದ ಎರಡನೇ ಹಬ್ಬ ಶ್ರೀರಾಮ ನವಮಿಗೆ ಎಲ್ಲೆಡೆ ಸಿದ್ಧತೆಗಳು ಸಾಗುತ್ತಿವೆ. ಪ್ರತಿ ಹಳ್ಳಿ ಹಾಗೂ ಮನೆಯಲ್ಲಿ ರಾಮನ ಜನ್ಮದಿನವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ದಿನ ರಾಮನ ಜೊತೆಗೆ ಹನುಮಂತನನ್ನು ಪೂಜಿಸಲಾಗುತ್ತದೆ. ಶ್ರೀರಾಮ ನವಮಿ ಹಿನ್ನೆಲೆಯಲ್ಲಿ ರಾಮನಿಗೆ ಸಂಬಂಧಿಸಿದ ಆಸಕ್ತಿಕರ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ದಶಾವತಾರದಲ್ಲಿ ಶ್ರೀ ರಾಮನ ಅವತಾರವು ಒಂದಾಗಿದೆ. ಶ್ರೀ ರಾಮನವಮಿಯ ಆಚರಣೆಯು ದುಷ್ಟರ ಮೇಲೆ ಒಳ್ಳೆಯತನಕ್ಕೆ ದೊರೆತ ವಿಜಯವನ್ನು ಸೂಚಿಸುತ್ತದೆ. ಅಧರ್ಮವನ್ನು ಸೋಲಿಸಿ ಧರ್ಮದ ಸ್ಥಾಪನೆಯನ್ನು ಮಾಡಿದ ಕಾರ್ಯವನ್ನು ಸೂಚಿಸುತ್ತದೆ. ಶ್ರಿರಾಮನನ್ನು ಸೂರ್ಯದೇವನ ಪೂರ್ವಜನೆಂದೂ ಜನ ನಂಬುತ್ತಾರೆ. ಯುದ್ದ ಕಾಲದಲ್ಲಿ ಸೂರ್ಯನ ಆರಾಧನೆಯಿಂದ ರಾವಣನ ಸಂಹಾರ ಆಯಿತೆಂದು ತಿಳಿದು ಬರುತ್ತದೆ.

ಚೈತ್ರಮಾಸದ ಶುಕ್ಲಪಕ್ಷದ ನವಮಿಯ ದಿನದಂದು ಶ್ರೀ ರಾಮರ ಜನನವಾಯಿಂತೆದು ವಾಲ್ಮೀಕಿ ಮಹರ್ಷಿಗಳು ಬರೆದಿರುವ ರಾಮಯಣಗ್ರಂಥದಿಂದ ತಿಳಿದುಬರುತ್ತದೆ. ಕಟಕ ಲಗ್ನದಲ್ಲಿ ಪುನ...