ಭಾರತ, ಏಪ್ರಿಲ್ 16 -- ಶ್ರೀರಾಮ ನವಮಿ ಆಚರಣೆಗೆ ಭಾರತದಾದ್ಯಂತ ಸಿದ್ಧತೆ ನಡೆದಿದೆ. ರಾಮ ನವಮಿಯಲ್ಲಿ ಪಾನಕ, ಕೋಸಂಬರಿ ಬಹಳ ವಿಶೇಷ. ಪಾನಕವು ರಾಮನಿಗೆ ಅಚ್ಚುಮೆಚ್ಚು ಎಂದು ಕೂಡ ಹೇಳಲಾಗುತ್ತದೆ. ಬೆಲ್ಲದಿಂದ ತಯಾರಿಸುವ ಪಾನಕವು ನೈವೇದ್ಯಕಷ್ಟೇ ಅಲ್ಲ, ಆರೋಗ್ಯಕ್ಕೂ ಉತ್ತಮ. ರಾಮ ನವಮಿಯಂದು ರಾಮ ಭಕ್ತರು ತಪ್ಪದೇ ಪಾನಕವನ್ನು ಸವಿಯುತ್ತಾರೆ. ಈ ದಿನ ದೇವಸ್ಥಾನಗಳಲ್ಲಿ, ಸಂಘ ಸಂಸ್ಥೆಯವರು ಪಾನಕ ತಯಾರಿಸುವುದು ಹಂಚುವ ಮೂಲಕ ರಾಮನ ಕೃಪೆಗೆ ಪಾತ್ರರಾಗುತ್ತಾರೆ. ಪಾನಕವಿಲ್ಲದೆ ಶ್ರೀರಾಮನವಮಿ ಆಚರಣೆಯೇ ಇಲ್ಲ ಎಂದು ಹೇಳಬಹುದು.

ಬೇಸಿಗೆಯಲ್ಲಿ ಶ್ರೀರಾಮನವಮಿ ಹಬ್ಬ ಬರುವ ಕಾರಣ, ಈ ಪಾನೀಯವು ಆರೋಗ್ಯಕ್ಕೂ ಉತ್ತಮ ಎನ್ನಿಸುತ್ತದೆ. ಇದು ಹಲವು ರೋಗಗಳನ್ನು ತಡೆದುಕೊಳ್ಳುವ ಶಕ್ತಿಯನ್ನು ದೇಹಕ್ಕೆ ಒದಗಿಸುತ್ತದೆ. ಇಂತಹ ಅದ್ಭುತ ಗುಣಗಳ, ದೇಹ ತಂಪು ಮಾಡುವ ರಾಮ ನವಮಿ ಪಾನಕವನ್ನ ತಯಾರಿಸುವ ವಿಧಾನ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು: ನೀರು - ಒಂದು ಲೀಟರ್, ತುರಿದ ಬೆಲ್ಲ - 150 ಗ್ರಾಂ, ಕಾಳುಮೆಣಸಿನ ಪುಡಿ - ಒಂದು ಚಮಚ, ಶುಂಠಿ ಪುಡಿ ...