ಭಾರತ, ಏಪ್ರಿಲ್ 16 -- ಹಿಂದೂಗಳ ಹೊಸ ವರ್ಷವಾದ ಯುಗಾದಿಯ ನಂತರ ಬರುವ ಮೊದಲ ಹಬ್ಬ ರಾಮ ನವಮಿ. ರಾಜ ದಶರಥ ಮತ್ತು ಕೌಸಲ್ಯೆಯ ಮಗನಾಗಿ ಶ್ರೀ ರಾಮನು ಅಂದು ಜನಿಸಿದನು ಎಂದು ನಮ್ಮ ಪುರಾಣಗಳು ಹೇಳುತ್ತವೆ. ವಸಂತ ಮಾಸದಲ್ಲಿ ಬರುವ ರಾಮ ನವಮಿಯನ್ನು ಹಿಂದೂಗಳು ಬಹಳ ಶ್ರದ್ಧಾ ಭಕ್ತಿಯಿಂದ ಆಚರಿಸುತ್ತಾರೆ. ರಾಮ ನವಮಿಯಲ್ಲಿ ಉಪವಾಸ ವೃತಾಚರಣೆ ಪ್ರಮುಖವಾದದ್ದು. ಆ ದಿನ ಪಾನಕ, ಕೋಸಂಬರಿಗಳನ್ನು ರಾಮನ ನೈವೇದ್ಯಕ್ಕೆ ಇಡಲಾಗುತ್ತದೆ. ಕೋಸಂಬರಿಯನ್ನು ಬಗೆ ಬಗೆಯ ರೀತಿಯಲ್ಲಿ ತಯಾರಿಸಲಾಗುತ್ತದೆ. ಹೆಸರು ಬೇಳೆ ಕೋಸಂಬರಿ, ಕಡ್ಲೆ ಬೇಳೆ-ಸೌತೆಕಾಯಿ ಕೋಸಂಬರಿ, ಹೆಸರು ಕಾಳು ಕೋಸಂಬರಿ, ತರಕಾರಿಗಳ ಕೋಸಂಬರಿ ಮುಂತಾದವುಗಳು. ರಾಮನವಮಿಗೆ ನೀವು ತಯಾರಿಸಬಹುದಾದ ಕೋಸಂಬರಿಗಳು ಇಲ್ಲಿವೆ.

ರಾಮ ನವಮಿಗೆ ತಯಾರಿಸುವ ಕೋಸಂಬರಿಗಳು ನೈವೇದ್ಯದ ಜೊತೆಗೆ ಆರೋಗ್ಯ ಪ್ರಯೋಜನಗಳನ್ನೂ ನೀಡುತ್ತದೆ. ಇವು ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವುದು ಸುಳ್ಳಲ್ಲ. ವಿವಿಧ ಬಗೆಯ ಕೋಸಂಬರಿ ಮಾಡುವ ವಿಧಾನವನ್ನು ಇಲ್ಲಿ ನೋಡೋಣ.

ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ - ...