ಭಾರತ, ಏಪ್ರಿಲ್ 16 -- ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ರಾಮನವಮಿ ಕೂಡ ಒಂದು. ಈ ವರ್ಷ ಏಪ್ರಿಲ್‌ 17 ರಂದು ರಾಮನವಮಿ ಇದೆ. ಶ್ರೀರಾಮನು ಪ್ರಪಂಚದಾದ್ಯಂತ ಲಕ್ಷಾಂತರ ಮಂದಿ ಭಕ್ತರನ್ನು ಹೊಂದಿದ್ದು, ಇವನನ್ನು ಪೂಜಿಸುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ ಎಂಬ ನಂಬಿಕೆ ಇದೆ. ಮನೆ ಆರ್ಥಿಕವಾಗಿ ಎಷ್ಟೇ ಸಮೃದ್ಧವಾಗಿದ್ದರೂ ಮಾನಸಿಕ ಶಾಂತಿ, ಸಂತೋಷ ಹಾಗೂ ನೆಮ್ಮದಿ ಬಹಳ ಮುಖ್ಯ. ಆದರೆ ಕೆಲವರಿಗೆ ಮನೆಯಲ್ಲಿ ಶಾಂತಿ, ನೆಮ್ಮದಿ ಎಂಬುದು ಇರುವುದೇ ಇಲ್ಲ. ಇನ್ನೂ ಕೆಲವರು ಎಷ್ಟೇ ದುಡಿದರೂ ಹಣಕಾಸಿನ ಕೊರತೆ ಕಾಡಬಹುದು. ಅದಕ್ಕೆ ಕಾರಣಗಳು ಹಲವಿರುತ್ತದೆ. ಆದರೆ ರಾಮನವಮಿಯಂದು ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಜೊತೆಗೆ ನಿಮ್ಮೆಲ್ಲಾ ಸಮಸ್ಯೆಗಳಿಗೂ ಮುಕ್ತಿ ದೊರೆಯುತ್ತದೆ.

ಭಗವಾನ್ ರಾಮನು ಚೈತ್ರ ಮಾಸ ಶುಕ್ಲಪಕ್ಷದ 9ನೇ ದಿನ ರಾಜ ದಶರಥನ ಮಗನಾಗಿ ಅಯೋಧ್ಯೆಯಲ್ಲಿ ಜನಿಸುತ್ತಾನೆ. ಈ ದಿನವನ್ನು ರಾಮನವಮಿ ಎಂದು ಆಚರಿಸಲಾಗುತ್ತದೆ. ರಾಮನ ಜನ್ಮದಿನದಂದು ಶಾಸ್ತ್ರೋಕ...