Bengaluru, ಏಪ್ರಿಲ್ 5 -- Rama Navami 2025: ಪ್ರತಿ ವರ್ಷ ರಾಮ ನವಮಿಯನ್ನು ದೇಶಾದ್ಯಂತ ಸಾಕಷ್ಟು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಇದು ವಿಷ್ಣುವಿನ ಏಳನೇ ಅವತಾರವಾದ ಶ್ರೀರಾಮನ ಜನ್ಮ ವಾರ್ಷಿಕೋತ್ಸವವನ್ನು ಸ್ಮರಿಸುವ ದಿನವಾಗಿದೆ. ಈ ವಿಶೇಷ ದಿನದಂದು ಭಕ್ತರು ರಾಮನ ಭಜನೆಗಳು, ಮೆರವಣಿಗೆ ಹಾಗೂ ಪಾನಕ ಕೋಸಂಬರಿ ಹಂಚುವ ಮೂಲಕ ಸಂಭ್ರಮಿಸುತ್ತಾರೆ.

ರಾಮ ನವಮಿಯನ್ನು ಆಚರಿಸಲು ಭಕ್ತರು ಕಾತುರದಿಂದ ಕಾಯುತ್ತಾರೆ. ದೃಕ್ ಪಂಚಾಂಗದ ಪ್ರಕಾರ, ಶ್ರೀರಾಮನು ಚೈತ್ರ ಮಾಸದ ಶುಕ್ಲ ಪಕ್ಷದ ನವಮಿ ತಿಥಿಯಂದು ಜನಿಸಿದನು. ದಿನದ ಮಧ್ಯಭಾಗವಾದ ಮಧ್ಯಾಹ್ನದ ಅವಧಿಯಲ್ಲಿ ಜನಿಸಿದ. ಆದ್ದರಿಂದ, ಪ್ರತಿ ವರ್ಷ, ರಾಮನವಮಿಯ ದಿನಾಂಕವನ್ನು ಸಮಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಈ ವರ್ಷ ರಾಮನವಮಿಯನ್ನು ಏಪ್ರಿಲ್ 6 ರ ಭಾನುವಾರ ಆಚರಿಸಲಾಗುತ್ತದೆ.

ದೃಕ್ ಪಂಚಾಂಗದ ಪ್ರಕಾರ, ನವಮಿ ತಿಥಿ 2025ರ ಏಪ್ರಿಲ್ 5 ರಂದು ಸಂಜೆ 07:26 ಕ್ಕೆ ಪ್ರಾರಂಭವಾಗುತ್ತದೆ ಮತ್ತು 2025ರ ಏಪ್ರಿಲ್ 6 ರಂದು ಸಂಜೆ 07:22 ಕ್ಕೆ ಕೊನೆಗೊಳ್ಳುತ್ತದೆ. ರಾಮ ...