Bangalore, ಏಪ್ರಿಲ್ 6 -- ಬಾಗಲಕೋಟೆ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ " ಬಿಜೆಪಿ ಸಂಸ್ಥಾಪನಾ ದಿನ ಹಾಗೂ ಶ್ರೀ ರಾಮ ನವಮಿ "ಯನ್ನು ಆಚರಿಸಲಾಯಿತು. ಸಂಸದರಾದ ಗದ್ದಿಗೌಡರ್‌, ನಾರಾಯಣಸಾ ಭಾಂಡಗೆ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಜರಿದ್ದರು.

ಶ್ರೀ ರಾಮ ನವಮಿ ಹಬ್ಬದ ಪ್ರಯುಕ್ತ ಬೆಂಗಳೂರಿನ ಮಡಿವಾಳ ಆಂಜನೇಯ ದೇವಸ್ಥಾನ ಬಳಿ ವಿಶೇಷ ಪೂಜೆಗಳು ನೆರವೇರಿದವು. ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು,

ಬೆಳಗಾವಿ ಜಿಲ್ಲೆಯ ಅಥಣಿ ಮಂಡಲ ವತಿಯಿಂದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಹಾಗೂ ರಾಮ ನವಮಿ ನಿಮಿತ್ಯ ಶ್ರೀ ರಾಮ ಚಂದ್ರನ ಫೋಟೋ ಪೂಜಾ ಕಾರ್ಯಕ್ರಮ ನೆರವೇರಿತು.ಮಾಜಿ ಶಾಸಕ ಮಹೇಶ್‌ ಕುಮಟಳ್ಳಿ ಮತ್ತಿತರರು ಇದ್ದರು.

ಬೆಂಗಳೂರಿನ ಆಕ್ಸ್‌ಫರ್ಡ್‌ ವಿದ್ಯಾ ಸಂಸ್ಥೆಯ ಸಂತೋಷ್‌ ಸಜ್ಜನ್‌ ಮಿತ್ರ ಅವರ ನಿವಾಸದಲ್ಲಿ ರಾಮಚಂದ್ರ ಮೂರ್ತಿಗೆ ವಿಶೇಷ ಪೂಜೆ ನೆರವೆರಿತು

ಭಾರತೀಯ ಜನತಾ ಪಕ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ರಾಮ ನವಮಿ ಪ್ರಯುಕ್ತ ಇಂದು ಬೀದರ್‌ನ ಬಿಜೆಪಿ ಕಚೇರಿಯಲ್ಲಿ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಣೆ...