Bengaluru, ಫೆಬ್ರವರಿ 2 -- Raju James Bond Trailer: ಫಸ್ಟ್ ರ‍್ಯಾಂಕ್ ರಾಜು ಸಿನಿಮಾ ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ ರಾಜು ಜೇಮ್ಸ್ ಬಾಂಡ್ ಚಿತ್ರ ಇದೀಗ ಬಿಡುಗಡೆಯ ಸನಿಹ ಬಂದಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್‌ ಬಿಡುಗಡೆ ಆಗಿದೆ. ಸ್ಯಾಂಡಲ್‌ವುಡ್‌ ನಟ ಶ್ರೀಮುರಳಿ, ಈ ಚಿತ್ರದ ಟ್ರೇಲರ್‌ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಹಾಸ್ಯ ಪ್ರಧಾನ ಸಿನಿಮಾ ಫೆಬ್ರವರಿ 14ರಂದು ರಾಜ್ಯದ್ಯಂತ ಬಿಡುಗಡೆ ಆಗಲಿದೆ. ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣದ ಈ ಚಿತ್ರವನ್ನು ದೀಪಕ್ ಮಧುವನಹಳ್ಳಿ ನಿರ್ದೇಶನ ಮಾಡಿದ್ದಾರೆ.

ಟ್ರೇಲರ್‌ ಬಿಡುಗಡೆ ಮಾಡಿ ಮಾತನಾಡಿದ ಶ್ರೀಮುರಳಿ, ಗುರುನಂದನ್ ನಮ್ಮ‌ ಕುಟುಂಬದ ಆತ್ಮೀಯರು‌. ಅವರು ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡು ಚೆನ್ನಾಗಿ ಮೂಡಿಬಂದಿದೆ. ನಾಯಕ ಹಾಗೂ ನಾಯಕಿಯ ಅಭಿನಯ ಹಾಗೂ ನಿರ್ದೇಶನ ಚೆನ್ನಾಗಿದೆ. ನಿರ್ಮಾಪಕರು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಣ ಮಾಡಿರುವುದು ತೆರೆಯ ಮೇಲೆ ಗೊತ್ತಾಗುತ್ತಿದೆ. ಚಿತ್ರ ...