ಭಾರತ, ಫೆಬ್ರವರಿ 13 -- Raju James Bond: ಫಸ್ಟ್‌ ರ‍್ಯಾಂಕ್ ರಾಜು ಸಿನಿಮಾ ಮೂಲಕ ಖ್ಯಾತಿ ಪಡೆದ ನಟ ಗುರುನಂದನ್‌, ಇದೀಗ ಅದೇ ರಾಜು ಹೆಸರನ್ನು ಮುಂದುವರಿಸಿಕೊಂಡು ಹೋಗಿದ್ದಾರೆ. ಅಂದರೆ, ರಾಜು ಜೇಮ್ಸ್‌ ಬಾಂಡ್‌ ಸಿನಿಮಾ ಇನ್ನೇನು ಫೆ. 14ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಚಿತ್ರದ ಬಿಡುಗಡೆ ಪೂರ್ವ ಕಾರ್ಯಕ್ರಮ ಇತ್ತೀಚೆಗಷ್ಟೇ ಅಷ್ಟೇ ಅದ್ಧೂರಿಯಾಗಿ ನೆರವೇರಿತು.

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಮತ್ತು ಗೃಹಸಚಿವ ಜಿ. ಪರಮೇಶ್ವರ್‌ ಈ ಪ್ರೀ ರಿಲೀಸ್‌ ಇವೆಂಟ್‌ಗೆ ಆಗಮಿಸಿ, ಚಿತ್ರತಂಡಕ್ಕೆ ಶುಭಕೋರಿದ್ದಾರೆ. ರಾಜು ಜೇಮ್ಸ್‌ ಬಾಂಡ್‌ ಚಿತ್ರವನ್ನು ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಭರ್ತೂರ್ ನಿರ್ಮಾಣ ಮಾಡಿದ್ದಾರೆ. ದೀಪಕ್ ಮಧುವನಹಳ್ಳಿ ಈ ಚಿತ್ರದ ನಿರ್ದೇಶಕರು.

ಮೊದಲಿಗೆ ಚಿತ್ರದ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ್‌, "ರಾಜು ಜೇಮ್ಸ್ ಬಾಂಡ್" ಚಿತ್ರದ ತುಣುಕು ಹಾಗೂ ಹಾಡುಗಳನ್ನು ನೋಡಿದರೆ, ಚಿತ್ರ ಯಶಸ್ವಿಯಾಗುವ ಎಲ್ಲಾ ಲಕ್ಷಣಗಳು ಇದೆ. ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಕೋರಿದರು.

ಇದ...