ಭಾರತ, ಏಪ್ರಿಲ್ 11 -- Raid 2 song: ಅಜಯ್ ದೇವಗನ್ ಮತ್ತು ರಿತೇಶ್ ದೇಶ್ ಮುಖ್ ನಟನೆಯ ರೈಡ್‌ 2 ಸಿನಿಮಾದಲ್ಲಿ ತಮನ್ನಾ ಭಾಟಿಯಾ ವಿಶೇಷ ಡ್ಯಾನ್ಸ್‌ ಪ್ರದರ್ಶಿಸಿದ್ದಾರೆ. ಇದೀಗ ರೈಡ್‌ 2 ಸಿನಿಮಾದ ನಶಾ ಹಾಡು ಬಿಡುಗಡೆಯಾಗಿದೆ. ಈ ಹಾಡಿನಲ್ಲಿ ತಮನ್ನಾ ತಮ್ಮ ಅಭಿಮಾನಿಗಳಿಗಾಗಿ ಆಕರ್ಷಕ ನೃತ್ಯ ಪ್ರದರ್ಶನ ನೀಡಿದ್ದಾರೆ. ಈ ಹಾಡಿನಲ್ಲಿ ಎಲ್ಲರೂ ಬಾಟಲ್‌ ಹಿಡಿದು ಕುಡಿಯುತ್ತಿದ್ದಾರೆ. ಅವರ ನಡುವೆ ತಮನ್ನಾ ಸಖತ್‌ ಡ್ಯಾನ್ಸ್‌ ಮಾಡಿದ್ದಾರೆ. ಇಂದು ಇಂಟರ್‌ನೆಟ್‌ನಲ್ಲಿ ನಶಾ ಹಾಡು ನಶೆ ಎಬ್ಬಿಸಿದೆ. ಆದರೆ, ಕೆಲವರ ಪ್ರಕಾರ ಈ ಹಾಡು ತಮನ್ನಾ ಅವರ ಈ ಹಿಂದಿನ ಸ್ತ್ರೀ 2 ಸಿನಿಮಾದ ಆಜ್ ಕಿ ರಾತ್‌ನಷ್ಟು ಕಿಕ್‌ ನೀಡುತ್ತಿಲ್ಲ ಎಂದಿದ್ದಾರೆ.

ತಮನ್ನಾ ಭಾಟಿಯಾ ಶುಕ್ರವಾರ ಮಧ್ಯಾಹ್ನ ತಮ್ಮ ಯೂಟ್ಯೂಬ್‌ನಲ್ಲಿ ತಮ್ಮ ರೈಡ್‌ 2 ಹಾಡನ್ನು ಹಂಚಿಕೊಂಡಿದ್ದಾರೆ. ಈ ಹಾಡಿನಲ್ಲಿ ತಮನ್ನಾ ತನ್ನ ಸಿಜ್ಲಿಂಗ್ ಚಲನೆಗಳೊಂದಿಗೆ ಗ್ಲಾಮರ್ ಸೇರಿದೆ. ಇವರ ಬೆಲ್ಲಿ ಡ್ಯಾನ್ಸ್‌ಗೆ ಫ್ಯಾನ್ಸ್‌ ಖುಷಿಗೊಂಡಿದ್ದಾರೆ. ಈ ಹಾಡಿಗೆ ಜಾನಿ ಸಾಹಿತ್ಯ ಬರೆದಿದ್ದು...