ಭಾರತ, ಫೆಬ್ರವರಿ 22 -- ಒಂಬತ್ತು ಗ್ರಹಗಳಲ್ಲಿ ರಾಹು ಅತ್ಯಂತ ಅಶುಭ ಗ್ರಹ. ಅವನು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತಾನೆ. ಅವನ ಸ್ಥಾನ ಬದಲಾವಣೆಯು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ. ರಾಹು ಮತ್ತು ಕೇತು ಬೇರ್ಪಡಿಸಲಾಗದ ಗ್ರಹಗಳು. ರಾಹು ಪ್ರತಿ 18 ತಿಂಗಳಿಗೊಮ್ಮೆ ತನ್ನ ಸ್ಥಾನವನ್ನು ಬದಲಿಸುತ್ತಾನೆ. ಶನಿಯ ನಂತರ ರಾಹು ಹಾಗೂ ಕೇತು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹಗಳಾಗಿವೆ.

ಕಳೆದ ವರ್ಷ ಅಂದರೆ 2024ರ ಅಕ್ಟೋಬರ್ ಅಂತ್ಯದಲ್ಲಿ ರಾಹು ಮೀನ ರಾಶಿಗೆ ಪ್ರಯಾಣ ಆರಂಭಿಸಿದನು. ಅವನು ವರ್ಷವಿಡೀ ಒಂದೇ ರಾಶಿಯಲ್ಲಿ ಸಂಚರಿಸುತ್ತಾನೆ. 2025ರಲ್ಲಿ ಅವನು ತನ್ನ ಸ್ಥಾನವನ್ನು ಬದಲಾಯಿಸುತ್ತಾನೆ. ಈ ವರ್ಷ ಮೇ ತಿಂಗಳ 18 ರಂದು ರಾಹು ಶನಿಯ ಸ್ವಂತ ರಾಶಿಯಾದ ಕುಂಭ ರಾಶಿಗೆ ಸ್ಥಳಾಂತರಗೊಳ್ಳುತ್ತಾನೆ. ರಾಹುವಿನ ಕುಂಭ ಯಾತ್ರೆಯಿಂದಾಗಿ ಯೋಗವನ್ನು ಅನುಭವಿಸುವ ಕೆಲವು ರಾಶಿಯವರು ಇವರೇ ನೋಡಿ.

ಮೇಷ: 2025ನೇ ವರ್ಷವು ನಿಮ್ಮ ರಾಶಿಗೆ ಅನುಕೂಲಕರ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚ...