Bengaluru, ಮಾರ್ಚ್ 3 -- ಒಂಬತ್ತು ಗ್ರಹಗಳಲ್ಲಿ ರಾಹು ಮತ್ತು ಕೇತುವನ್ನು ಅಶುಭ ಗ್ರಹಗಳೆಂದು ಪರಿಗಣಿಸಲಾಗುತ್ತದೆ. ರಾಹು ಹಾಗೂ ಕೇತು ಪ್ರತಿ 18 ತಿಂಗಳಿಗೊಮ್ಮೆ ತಮ್ಮ ಸ್ಥಾನವನ್ನು ಬದಲಿಸುತ್ತವೆ. ಶನಿಯ ನಂತರ ರಾಹು ಹಾಗೂ ಕೇತು ಅತ್ಯಂತ ನಿಧಾನವಾಗಿ ಚಲಿಸುವ ಗ್ರಹಗಳಾಗಿವೆ. ರಾಹು ಮತ್ತು ಕೇತು ಬೇರ್ಪಡಿಸಲಾಗದ ಗ್ರಹಗಳು. ಈ ಎರಡು ಗ್ರಹಗಳು ಬೇರೆ ಬೇರೆ ರಾಶಿಚಕ್ರ ಚಿಹ್ನೆಗಳಲ್ಲಿ ಪ್ರಯಾಣಿಸಿದರೂ, ಅವುಗಳ ಪರಿಣಾಮ ಒಂದೇ ಆಗಿರುತ್ತದೆ.

ಸದ್ಯ ರಾಹು ಮೀನರಾಶಿಯಲ್ಲಿ ಸಂಚಾರ ಮಾಡುತ್ತಿದ್ದಾನೆ. 2023ರ ಅಕ್ಟೋಬರ್‌ನಲ್ಲಿ ರಾಹು ಮೀನರಾಶಿಗೆ ಪ್ರವೇಶ ಮಾಡಿದ್ದ. 2024 ಪೂರ್ತಿ ರಾಹು ಮೀನರಾಶಿಯಲ್ಲೇ ಸಂಚಾರ ಮಾಡಿದ್ದು, 2025ರ ಮೇ ತಿಂಗಳಲ್ಲಿ ರಾಹು ಕುಂಭ ರಾಶಿಗೆ ಪ್ರವೇಶ ಮಾಡಲಿದ್ದಾನೆ. ರಾಹುವಿನ ಸ್ಥಾನಪಲ್ಲಟವು ದ್ವಾದಶ ರಾಶಿಗಳ ಮೇಲೆ ಪರಿಣಾಮ ಉಂಟು ಮಾಡಲಿದೆ.

ರಾಹುವಿನ ಸ್ಥಾನ ಬದಲಾವಣೆಯು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರಿದರೂ ಕೆಲವು ರಾಶಿಯವರು ಇದರಿಂದ ರಾಜಯೋಗ ಅನುಭವಿಸಲಿದ್ದಾರೆ. ಇದರಿಂದ ಕೆಲವು ರಾಶಿಯವರಿಗೆ ಕೋಟ್ಯ...