ಭಾರತ, ಮಾರ್ಚ್ 30 -- ಚಂದನವನದ ನಟಿ ರಾಗಿಣಿ ದ್ವಿವೇದಿ ಸಿನಿಮಾಗಳಲ್ಲಿನ ನಟನೆ ಜತೆಗೆ ಸೋಷಿಯಲ್‌ ಮೀಡಿಯಾದಲ್ಲಿಯೂ ಸಕ್ರಿಯರು. ಸದಾ ಒಂದಿಲ್ಲೊಂದು ಫೋಟೋ ಗೊಂಚಲನ್ನು ಶೇರ್‌ ಮಾಡುತ್ತಲೇ ಇರುತ್ತಾರೆ.

ಸಾಂಪ್ರದಾಯಿಕ ಫೋಟೋಗಳಿಗೂ ಸೈ, ಹಾಟ್‌ ಎನಿಸುವ ಬೋಲ್ಡ್‌ ಭಂಗಿಯ ಫೋಟೋಗಳನ್ನೂ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿರುತ್ತಾರೆ ಈ ನಟಿ.

ಇದೀಗ ಇದೇ ನಟಿ ಮಲ್ಲಿಗೆ ಹೂಗಳಿಂದ ಮಾಡಿದ ಕಾಸ್ಟ್ಯೂಮ್‌ ಧರಿಸಿ ಮಾದಕ ಭಂಗಿಯಲ್ಲಿ ಪೋಸ್‌ ನೀಡಿದ್ದಾರೆ.

ಮಲ್ಲಿಗೆ ಹೂಗಳನ್ನೇ ರವಿಕೆ ಮಾಡಿಕೊಂಡು, ಸೋಷಿಯಲ್‌ ಮೀಡಿಯಾದಲ್ಲಿ ಫೋಟೋ ಶೇರ್‌ ಮಾಡಿಕೊಂಡಿದ್ದಾರೆ.

ನಟಿಯ ಪೋಟೋಗಳಿಗೆ ಸೋಷಿಯಲ್‌ ಮೀಡಿಯಾದಲ್ಲಿ ಬಗೆ ಬಗೆಯ ಕಾಮೆಂಟ್‌ಗಳು ಸಂದಾಯವಾಗಿದ್ದು, ಮೆಚ್ಚುಗೆ ವ್ಯಕ್ತವಾಗುತ್ತಿವೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಮಲಯಾಳಂ ಸ್ಟಾರ್‌ ನಟ ಮೋಹನ್‌ ಲಾಲ್‌ ಅವರ ಜತೆಗೆ ವೃಷಭ ಹೆಸರಿನ ಸಿನಿಮಾದಲ್ಲಿ ರಾಗಿಣಿ ನಟಿಸುತ್ತಿದ್ದಾರೆ. ಸಾರಿ ಕರ್ಮ ರಿಟರ್ನ್ಸ್‌ ಚಿತ್ರದಲ್ಲಿಯೂ ಬಿಜಿಯಾಗಿದ್ದಾರೆ.

Published by HT Digital ...