ಭಾರತ, ಮಾರ್ಚ್ 6 -- Raghavendra Swamy Vardhanti 2025: ಇಂದು (ಮಾರ್ಚ್ 6, ಗುರುವಾರ) ಗುರು ರಾಘವೇಂದ್ರ ಸ್ವಾಮಿಗಳ ವರ್ಧಂತಿ. 16ನೇ ಶತಮಾನದ ಸಂತ ಹಾಗೂ ಗುರುಗಳಾದ ರಾಘವೇಂದ್ರ ಸ್ವಾಮೀಜಿಗಳ ಜಯಂತಿ ಅಥವಾ ವರ್ಧಂತಿಯನ್ನು ಪ್ರತಿ ವರ್ಷ ಮಾರ್ಚ್ 6 ರಂದು ಆಚರಿಸಲಾಗುತ್ತದೆ. ಕರ್ನಾಟಕ, ತೆಲಂಗಾಣ ಹಾಗೂ ಆಂಧ್ರ ಪ್ರದೇಶದಲ್ಲಿ ಅನುಸರಿಸುವ ಸಂಪ್ರದಾಯಿಕ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸದ ಶುಕ್ಲ ಪಕ್ಷದ ಏಳನೇ ದಿನದಂದು ಶ್ರೀ ರಾಯರ ವರ್ಧಂತಿಯನ್ನು ಆಚರಿಸಲಾಗುತ್ತದೆ. ವೈಷ್ಣವ ಧರ್ಮವನ್ನು ಪ್ರತಿಪಾಸಿದ್ದ ರಾಯರು, ಮಧ್ವಾಚಾರ್ಯರ ದ್ವೈತ ತತ್ವವನ್ನು ಜನಪ್ರಿಯಗೊಳಿಸಿದ್ದರು. ಕರ್ನಾಟಕ ಹಾಗೂ ತೆಲುಗು ಭಾಷಿಕ ರಾಜ್ಯಗಳಲ್ಲಿ ಹೆಚ್ಚಿನ ಭಕ್ತರನ್ನು ಹೊಂದಿದ್ದಾರೆ. ಜಗತ್ತಿನ ಮೂಲೆ ಮೂಲೆಯಲ್ಲಿರುವ ಭಕ್ತರು ಇಂದು (ಮಾರ್ಚ್ 6, ಗುರುವಾರ) ರಾಯರ ಜಯಂತಿಯನ್ನು ಆಚರಿಸುತ್ತಾರೆ.

ರಾಯರ ಪ್ರಮುಖ ಸನ್ನಿಧಾನವಾದ ಮಂತ್ರಾಲಯದಲ್ಲಿ ವರ್ಧಂತಿ ನಿಮಿತ್ತ ಶ್ರೀ ರಾಘವೇಂದ್ರ ಗುರು ವೈಭವೋತ್ಸವ ಎಂಬ ಹೆಸರಿಯಲ್ಲಿ ಅದ್ಧೂರಿ ಆಚರಣೆ ನಡೆಯುತ್...