ಭಾರತ, ಮಾರ್ಚ್ 18 -- Rachana Rai: ಕರ್ನಾಟಕದ ಕರಾವಳಿ ಜಿಲ್ಲೆಗಳಿಂದ ಕನ್ನಡ, ಹಿಂದಿ ಸಿನಿಮಾ ರಂಗಕ್ಕೆ ಆಗಮಿಸಿ ಸಾಕಷ್ಟು ಜನರು ಯಶಸ್ಸು ಪಡೆದಿದ್ದಾರೆ. ತುಳುವಿನ ಸರ್ಕಸ್ ಸಿನಿಮಾದಲ್ಲಿ ನಾಯಕಿಯಾಗಿದ್ದ ರಚನಾ ರೈ ಈಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಮುಂದಿನ ಚಿತ್ರ "Devil: The Hero' ಸಿನಿಮಾದಲ್ಲಿ ನಾಯಕಿಯಾಗಿದ್ದಾರೆ. ಈಕೆ ಕೇವಲ ನಟಿಯಲ್ಲ. ಬರಹ, ಕ್ರೀಡೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಇರುವ ಪ್ರತಿಭಾನ್ವಿತೆ. ಸದ್ಯ ಡೆವಿಲ್ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ದರ್ಶನ್ ಜತೆಗೆ ನಾಯಕಿಯಾಗಿ ಈಕೆ ಶೂಟಿಂಗ್‌ನಲ್ಲಿದ್ದಾರೆ. ಮಿಲನಾ ಪ್ರಕಾಶ್ ನಿರ್ದೇಶನದ ಈ ಸಿನಿಮಾದಲ್ಲಿ ಅವಕಾಶ ಪಡೆಯುವ ಮೂಲಕ ಈಕೆ ಗಮನ ಸೆಳೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಕೊಂಬೆಟ್ಟಿನಲ್ಲಿ ವಾಸವಾಗಿರುವ ರಚನಾ ರೈ ಟೀಚರ್ ಮಗಳು. ಹೌದು, ಇವರ ತಾಯಿ ಹೆಸರು ಗಂಗಾ ರೈ. ಪುತ್ತೂರಿನ ಹಾರಾಡಿ ಶಾಲೆಯ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾ...
Click here to read full article from source
To read the full article or to get the complete feed from this publication, please
Contact Us.