Bangalore, ಮಾರ್ಚ್ 15 -- Test OTT release: ನೆಟ್‌ಫ್ಲಿಕ್ಸ್‌ನಲ್ಲಿ ಏಪ್ರಿಲ್‌ 4ರಂದು ಬಿಡುಗಡೆಯಾಗಲಿರುವ ಟೆಸ್ಟ್‌ ಎಂಬ ಸಿನಿಮಾದಲ್ಲಿ ಆರ್‌. ಮಾಧವನ್‌ ಪಾತ್ರ ಪರಿಚಯ ಮಾಡಲಾಗಿದೆ. ತೊಂದರೆಯಲ್ಲಿರುವ ವಿಜ್ಞಾನಿ ಪಾತ್ರದಲ್ಲಿ ಇವರು ನಟಿಸಿದ್ದಾರೆ. ನಯನತಾರಾ ಕುಮುದಾ ಪಾತ್ರದಲ್ಲಿ, ಸಿದ್ಧಾರ್ಥ್‌ ಕ್ರಿಕೆಟಿಗ ಅರ್ಜುನ್‌ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೆಟ್‌ಫ್ಲಿಕ್ಸ್‌ ಕಳೆದ ಎರಡು ದಿನ ಇವರಿಬ್ಬರ ಪಾತ್ರ ಪರಿಚಯಿಸಿತ್ತು. ಇಂದು ಆರ್ ಮಾಧವನ್ ನಿರ್ವಹಿಸಿದ ಶರವಣನ್ ಪಾತ್ರದ ಪರಿಚಯ ಮಾಡಲಾಗಿದೆ. ಚಿತ್ರದಲ್ಲಿ ಪ್ರತಿಭಾನ್ವಿತ ಆದರೆ ಹೋರಾಟ ನಡೆಸುತ್ತಿರುವ ವಿಜ್ಞಾನಿಯ ಪಾತ್ರದಲ್ಲಿ ಆರ್‌. ಮಾಧವನ್‌ ನಟಿಸಿದ್ದಾರೆ.

ನೆಟ್‌ಫ್ಲಿಕ್ಸ್‌ನ ಟೆಸ್ಟ್‌ ಸಿನಿಮಾದಲ್ಲಿ ಮಾಧವನ್‌ ಅವರು ಶರವಣನ್‌ ಎಂಬ ಪಾತ್ರದಲ್ಲಿ ನಟಿಸಿದ್ದಾರೆ. ಇವರು‌ ಪ್ರತಿಭಾನ್ವಿತ, ಆದರೆ ತೊಂದರೆಯಲ್ಲಿರುವ ವಿಜ್ಞಾನಿ. ಇವರ ಮಹಾನ್‌ ಗುರಿ ಈಡೇರುವುದು ಕಷ್ಟವಾಗುತ್ತದೆ. ಒಟ್ಟಾರೆ, ಈ ಸಿನಿಮಾದಲ್ಲಿ ಅರ್ಜುನ್‌ಗೆ ಕ್ರಿಕೆಟ್‌ ಟೆಸ್ಟ್‌, ನಯನಾತಾರಾಳ...