ಭಾರತ, ಮಾರ್ಚ್ 8 -- ಫ್ರೆಂಚ್ ಓಪನ್ ಸೂಪರ್ 750 (French Open Super 750) ಬ್ಯಾಡ್ಮಿಂಟನ್ ಟೂರ್ನಮೆಂಟ್‌ನಿಂದ ಭಾರತದ ಭರವಸೆಯ ಆಟಗಾರ್ತಿ ಪಿವಿ ಸಿಂಧು PV Sindhu) ಹೊರಬಿದ್ದಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹಾಲಿ ಒಲಿಂಪಿಕ್ ಚಾಂಪಿಯನ್ ಚೀನಾದ ಚೆನ್ ಯು ಫೀ (Chen Yu Fei) ವಿರುದ್ಧ ಸೋತು ಮುಗ್ಗರಿಸಿದ್ದಾರೆ. ಗಾಯದಿಂದ ಚೇತರಿಸಿಕೊಂಡು ಸುದೀರ್ಘ ನಾಲ್ಕು ತಿಂಗಳ ಅವಧಿಯ ಬಳಿಕ ಅಖಾಡಕ್ಕೆ ಇಳಿದ ಸಿಂಧು, ಮೊದಲ ಅಭಿಯಾನದಲ್ಲಿ ಸೋಲು ಕಂಡಿದ್ದಾರೆ.

ಸುಮಾರು ಒಂದು ಗಂಟೆ 32 ನಿಮಿಷಗಳ ಕಾಲ ನಡೆದ ರೋಚಕ ಪೈಪೋಟಿಯಲ್ಲಿ ಚಾಂಪಿಯನ್‌ ಆಟಗಾರ್ತಿ ವಿರುದ್ಧ ಒಲಿಂಪಿಕ್‌ ಪದಕ ವಿಜೇತ ಆಟಗಾರ್ತಿ ಕಠಿಣ ಪೈಪೋಟಿ ನೀಡಿದರು. ತಮ್ಮ ಸ್ಟ್ರೋಕ್ ಪ್ಲೇ ಮತ್ತು ದೈಹಿಕ ಸಾಮರ್ಥ್ಯವನ್ನು ಸಮರ್ಥವಾಗಿ ಪ್ರದರ್ಶಿಸಿದರು. ಆದರೆ, ವಿಶ್ವದ ಎರಡನೇ ಶ್ರೇಯಾಂಕಿತ ಆಟಗಾರ್ತಿ ಹಾಗೂ ಮತ್ತು ಹಾಲಿ ಚಾಂಪಿಯನ್ ಚೆನ್ ವಿರುದ್ಧ 24-22, 17-21, 18-21 ಅಂತರದಲ್ಲಿ ಸೋಲನುಭವಿಸಿದರು. ಕೊನೆಯವರೆಗೂ ರೋಚಕ ಹೋರಾಟ ನೀಡಿದ ಸಿಂಧು, ವೀರೋಚಿತ ಸೋಲು ಕಂ...