Puttur, ಏಪ್ರಿಲ್ 10 -- Puttur Jatre 2025: ಕರಾವಳಿಯ ಜಾತ್ರೋತ್ಸವಗಳಲ್ಲೇ ಅತ್ಯಂತ ವಿಶಿಷ್ಟವಾಗಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೋತ್ಸವ ಇಂದಿನಿಂದ ಆರಂಭವಾಗಿದೆ. ಜಾತ್ರೋತ್ಸವಕ್ಕೆ ಗುರುವಾರ ಧ್ವಜಾರೋಹಣ ನಡೆದಿದ್ದು, ಸಂಜೆ ಶ್ರೀದೇವರ ಪೇಟೆ ಸವಾರಿ ಜಾತ್ರೆ ಮುಗಿಯುವವರೆಗೂ ಪ್ರತಿದಿನ ಇರಲಿದೆ. ಏಪ್ರಿಲ್‌ 10 ರಿಂದ 18ರವರೆಗೆ ಪ್ರತೀ ದಿನ ಸವಾರಿ ನಡೆಯಲಿದ್ದು, ದಿನಕ್ಕೊಂದು ದಿಕ್ಕುಗಳಿಗೆ ತೆರಳಿ ಮಾರ್ಗದುದ್ದಕ್ಕೂ ಕಟ್ಟೆಪೂಜೆಗಳನ್ನು ದೇವರು ಸ್ವೀಕರಿಸಲಿದ್ದಾರೆ. ಹಾದಿಯುದ್ದಕ್ಕೂ ನೂರಾರು ಕಡೆ ಹಣ್ಣುಕಾಯಿ, ಆರತಿ ಸೇವೆಗಳು ಸಲ್ಲಿಕೆಯಾಗಲಿದ್ದು, ಸಹಸ್ರಾರು ಭಕ್ತರು ರಸ್ತೆಯ ಇಕ್ಕೆಲಗಳಲ್ಲಿ ಶ್ರೀದೇವರ ಬರುವಿಕೆಗಾಗಿ ಕಾದಿರುತ್ತಾರೆ. ದೇವರ ಸವಾರಿ ನಡೆಯುವ ದಿನ ಆಯಾ ರಸ್ತೆಗಳನ್ನು ನೀರಿನಿಂದ ತೊಳೆದು, ಬಂಟಿಂಗ್, ತಳಿರು ತೋರಣ ಕಟ್ಟುವುದಲ್ಲದೆ, ಕಟ್ಟೆಗಳನ್ನು ಅಲಂಕರಿಸಲಾಗುತ್ತದೆ.

ಕಟ್ಟೆಪೂಜೆ ನಡೆಯುವಲ್ಲಿ ಸಾರ್ವಜನಿಕ ಪ್ರಸಾದ, ತಂಪುಪಾನೀಯ, ಸಿಹಿತಿಂಡಿ ವಿತರಣೆ ನಡೆಯುತ್ತದೆ. ಕೆಲವೊಂ...