Bengaluru, ಫೆಬ್ರವರಿ 15 -- Puttakkana Makkalu Serial: ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ, ಒಂದು ಕಾಲದ ನಂಬರ್‌ 1 ಧಾರಾವಾಹಿ ಎಂದರೆ ಅದು ಪುಟ್ಟಕ್ಕನ ಮಕ್ಕಳು. ಟಿಆರ್‌ಪಿಯಲ್ಲಿ ವರ್ಷಗಟ್ಟಲೇ ಅಗ್ರಸ್ಥಾನದಲ್ಲಿ ಕೂತು, ಇಡೀ ಕರುನಾಡ ಮನೆ ಮನ ಗೆದ್ದಿದ್ದು ಈ ಸೀರಿಯಲ್‌. ಹಿರಿಯ ನಟಿ ಉಮಾಶ್ರೀ , ಮಂಜು ಭಾಷಿಣಿ ಸೇರಿ ಹತ್ತು ಹಲವು ಕಲಾವಿದರು ನಟಿಸುತ್ತಿರುವ ಪುಟ್ಟಕ್ಕನ ಮಕ್ಕಳು ಧಾರಾವಾಹಿ, ಕಿರುತೆರೆ ಲೋಕದಲ್ಲಿ ಒಂದಷ್ಟು ಹೊಸ ಹೊಸ ದಾಖಲೆಗಳನ್ನೂ ಬರೆದಿದೆ. ಇಂತಿಪ್ಪ ಸೀರಿಯಲ್‌ನಲ್ಲೀಗ, ಸ್ಟಾರ್‌ ನಾಯಕನ ಆಗಮನವಾಗಿದೆ!

ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಅಮ್ಮನ ಕನಸನ್ನು ನನಸು ಮಾಡಿದ್ದಳು ಮಗಳು ಸ್ನೇಹಾ. ಕಷ್ಟಗಳನ್ನು ಎದುರಿಸಿ ಐಎಎಸ್‌ ಪರೀಕ್ಷೆ ಬರೆದು ಡಿಸಿ ಆಗಿದ್ದಳು ಸ್ನೇಹಾ. ಸ್ನೇಹಾಳ ಈ ಸಾಧನೆಗೆ ಮನೆ ಮಂದಿ ಮಾತ್ರವಲ್ಲ ಊರವರೂ ಮೆಚ್ಚಿ ಕುಣಿದಾಡಿದ್ದರು. ಅಧಿಕಾರ ಸಿಕ್ಕ ಕೆಲವೇ ದಿನಗಳಲ್ಲಿ ಸ್ನೇಹಾ ಭೀಕರ ಅಪಘಾತದಲ್ಲಿ ಸಾವನ್ನಪ್ಪುತ್ತಾಳೆ. ಆ ಸಾವಿನ ಸುದ್ದಿ ಪುಟ್ಟಕ್ಕನ ಜತೆಗೆ ಇಡೀ ಗ್ರಾಮಕ್ಕೂ ...