ಭಾರತ, ಜನವರಿ 30 -- 2024ರಲ್ಲಿ ಬಿಡುಗಡೆಯಾಗಿ ದೇಶದಾದ್ಯಂತದ ಚಿತ್ರಮಂದಿರಗಳ ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿದ್ದ, ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಚಲನಚಿತ್ರ ನೆಟ್‌ಫ್ಲಿಕ್ಸ್‌ ಮೂಲಕ ಒಟಿಟಿಗೆ ಲಗ್ಗೆಯಿಟ್ಟಿದೆ. ಜನವರಿ 29ರ ಮಧ್ಯರಾತ್ರಿಯಿಂದ ಮೂಲ ತೆಲುಗು ಸೇರಿದಂತೆ ತಮಿಳು, ಹಿಂದಿ ಮಲಯಾಳಂ ಭಾಷೆಗಳಲ್ಲಷ್ಟೇ ಬಿಡುಗಡೆಯಾಗಿದ್ದ ಪುಷ್ಪ 2 ಸಿನಿಮಾದ ಕನ್ನಡ ಅವತರಣಿಕೆ ಮಾತ್ರ ಒಟಿಟಿ ವೇದಿಕೆಗೆ ಲಗ್ಗೆಯಿಟ್ಟಿರಲಿಲ್ಲ. ಈ ಕುರಿತು ಕನ್ನಡ ಸಿನಿಮಾ ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದರು. ನಂತರದ ಬೆಳವಣಿಗೆಗಳಲ್ಲಿ ಪುಷ್ಪ 2 ಸಿನಿಮಾದ ಕನ್ನಡ ಅವರಣಿಕೆ ಸಹ ಬಿಡುಗಡೆಯಾಗಲಿದೆ ಎಂದು ನೆಟ್‌ಫ್ಲಿಕ್ಸ್ ಸ್ಪಷ್ಟನೆ ನೀಡಿತ್ತು. ಕೊನೆಗೂ ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಕನ್ನಡದಲ್ಲೂ ಪುಷ್ಪ 2 ಬಿಡುಗಡೆಯಾಗಿದೆ. ಈ ಮೂಲಕ ಕನ್ನಡ ಭಾಷೆಯಲ್ಲೂ ಒಟಿಟಿ ಮೂಲಕ ನೀವು ಪುಷ್ಪ 2 ಸಿನಿಮಾ ವೀಕ್ಷಿಸಬಹುದಾಗಿದೆ.

ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಂಡ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮತ್ತಿತ...